ಬುಧವಾರ, ನವೆಂಬರ್ 28, 2018

617.ಗಝಲ್-48

ಗಝಲ್

ನಿನ್ನ ಮುಖ ನನ್ನ ಬಳಿ ಬಂದಾಗ ಖುಷಿಪಟ್ಟೆ
ನಿನ್ನ ಕೈ ಬೆರಳುಗಳು  ನನ್ನ ಸ್ಪರ್ಶಿಸಿದಾಗ ಖುಷಿಪಟ್ಟೆ.

ಕಣ್ಣುಗಳೆರಡು ಮಾತನಾಡುತಲಿದ್ದವು
ಸುರಿವ ಮಳೆ ನಿನ್ನ ನೆನಪ ತಂದಾಗ ಖುಷಿಪಟ್ಟೆ..

ಕಾಮನ ಬಿಲ್ಲಿನ ಬಣ್ಣದಲಿ ನಿನ್ನ ಕಂಡೆ
ಜಾರುವ ಮೋಡದಲಿ ನೀ ಕಂಡಾಗ ಖುಷಿಪಟ್ಟೆ..

ಮುಂಜಾನೆದ್ದು ನಿನ್ನ ಕಿರಣ ನನ್ನೆಡೆ ಬಂತು
ನಿನ್ನ ಬಿಸಿಯಪ್ಪುಗೆ ಸಿಕ್ಕಾಗ ಖುಷಿಪಟ್ಟೆ..

ರಾತ್ರಿ ನೀನಿಲ್ಲವೆಂದು ಬೇಸರವಿತ್ತು
ಚಂದಿರ ನಿನ್ನ ಬೆಳಕ ಪ್ರತಿಬಿಂಬಿಸಿದಾಗ ಖುಷಿಪಟ್ಟೆ..

ಭೂಮಿಗೆ ಸೂರ್ಯನದೇ ಆಸರೆಯೆಂದರು ಜನ,
ನೀ ನಿತ್ಯ ನನ್ನ ನೋಡಲು ಬರುವಾಗ ಖುಷಿಪಟ್ಟೆ.

ರವಿಯೊಲವು ಇಳೆಗಲ್ಲದೆ ಇನ್ನಾರಿಗೆ ಹೇಳು
ನಿನ್ನ ಪ್ರೇಮವ ಕಂಡು ನನ್ನೊಡಲಲಿ ಖುಷಿಪಟ್ಟೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ