ಒಂದಾಗಿ
ಮೀ ಟೂ ಮೀ ಟೂ ಎಂದು ಟೂ ಹೇಳಿ
ಟೂಟೂ ಮೀಟಿಗೆ ಓಟು ಹಾಕುತ್ತಿರುವ ಮಹಿಳೆಯರೆ
ಎಲ್ಲರು ಸೇರುತ ವಿ ಟೂ ಜಾಗೃತಿಯ
ಹೊಸದಾದೊಂದು ಅಭಿಯಾನ ಆರಂಭಿಸಿ..
ನಿಮ್ಮ ಮಾನವನು ಮುಕ್ತ
ಹರಾಜು ಹಾಕಿಕೊಳ್ಳುವ ಬದಲು
ಭವಿಷ್ಯದ ಬಗ್ಗೆ ಚಿಂತನೆಗಳಿರಲಿ..
ನಮ್ಮ ತಲೆಗೆ ನಮ್ಮದೆ ಕೈ
ಇದು ನಿಮಗೆ ತಿಳಿದಿರಲಿ...
ಭಾರತವ ಸ್ವಚ್ಛಗೊಳಿಸೆ
ಒಟ್ಟಾಗಿ ಅಭಿಯಾನ ಮಾಡಿ..
ಮಾರಕ ರೋಗಗಳ ಬಗೆಗೆ ತಿಳಿಸೆ
ವಿ ಟೂ ಎನುತ ಒಟ್ಟುಗೂಡಿ..
ಒಗ್ಗಟ್ಟಿನಲ್ಲಿ ಬಲವಿದೆ
ಇದು ನಿಮಗೆ ತಿಳಿದಿದೆ
ಅತ್ತೆ ಸೊಸೆಯರೊಂದಾಗಿ
ಮಗನ ಜೀವನಕೆ ಸಹಕರಿಸಿ..
ಮನದ ಕೊಳೆಯ ಗುಡಿಸೆ
ಎಲ್ಲರೊಂದಾಗುವೆವು..ಬನ್ನಿ
ಗಿಡಮರಗಳ ನೆಟ್ಟು ಬೆಳೆಸಲು
ಕೂಡಿ ಮುಂದಾಗಿ ಬನ್ನಿ..
ತಾಯಿ ಭಾರತಿಯ ಸೇವೆಗಾಗಿ
ಲಂಚಾವತಾರದ ಕೊನೆಗಾಗಿ
ವರದಕ್ಷಿಣೆಯ ನಿರ್ಮೂಲನಕ್ಕೆ
ಶೋಷಣೆಯ ವಿರೋಧಿಸೆ ವಿ ಟೂ..
ನಡೆಯುತ ಬನ್ನಿ ಓಡುತ ಬನ್ನಿ
ಜಾತಿ ಮತ ಗೋಡೆಗಳ ಒಡೆಯೆ ಬನ್ನಿ
ಸಮಾಜ ಸೇವೆಗೆ ಒಟ್ಟಾಗಿ ಬನ್ನಿ
ದೇಶದುದ್ಧಾರಕೆ ವಿ ಟೂ, ಮಿ ಟೂ ಎನ್ನಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ