ಮಂಗಳವಾರ, ಜನವರಿ 8, 2019

684. ನಿನಗಾಗಿ

ನಿನಗಾಗಿ

ಬದುಕ ನಿರೀಕ್ಷೆಗಳು ನಿನಗಾಗಿ
ಕಾಯುವ ಪರಿಯು ನಿನಗಾಗಿ
ಮನದ ಭಾವಗಳು ನಿನಗಾಗಿ
ಕನಸು ಕಾರ್ಯಗಳು ನಿನಗಾಗಿ/

ಮನದ ಕನ್ನಡಿಯ ತೆರೆಯೆ
ನನ್ನ ಪ್ರತಿಬಿಂಬವು ನೀನು
ಬದುಕ ಬಾಗಿಲ ಸರಿಸೆ
ಬರುವ ಬಂಧುವೇ ನೀನು/

ಪ್ರೀತಿ ಹಣತೆಯ ಮೇಲೆ
ಪ್ರೇಮ ದೀಪವನುರಿಸಿರುವೆ
ಎಣ್ಣೆ ಬತ್ತಿಯನಿರಿಸಿರುವೆ
ರವಿಯ ಕಿರಣದಿ ಹೊಳೆದಿರುವೆ/

ನೀನಿಲ್ಲದೆ ನಿಜ ಬೆಳಕಿಲ್ಲ
ಗಾಢಾಂಧಕಾರವ ದೂಡುರುವೆ
ಮಳೆಕಾಣದ ಬರಡು ಭೂಮಿಗೆ
ಪ್ರೀತಿಯುದಕ ಹರಿಸಿರುವೆ/
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ