ಭಾನುವಾರ, ಜನವರಿ 13, 2019

705. ಮಕ್ಕಳ ಕವನ-7

ಸಂಕ್ರಾಂತಿ

ಬಂತು ಬಂತು ಸಂಕ್ರಾಂತಿ
ತಂದಿತು ನಮಗೆ ಕ್ರಾಂತಿ//

ಎಳ್ಳು ಬೆಲ್ಲ ಬೀರುವೆವು
ಸಿಹಿ ಕಹಿ ಎಲ್ಲ ಮರೆಯುವೆವು//

ಚಳಿಯಲಿ ಹೊದ್ದು ಮಲಗುವೆವು
ಎದ್ದು ಕಬ್ಬನು ಜಗಿಯುವೆವು//

ಮಾವನ ಮನೆಗೆ ಹೋಗುವೆವು
ಅಜ್ಜಿಯ ಕಜ್ಜಾಯ ತಿನ್ನುವೆವು//

ದೇವರ ನೆನೆದು ಬೇಡುವೆವು
ಪೂಜೆಯ ಮಾಡಲು ಸೇರುವೆವು//

ಹೊಸಬಟ್ಟೆಯ ತೊಟ್ಟು ನಲಿಯುವೆವು
ಹೊಸತನ ಬದುಕಲಿ ಕಾಣುವೆವು//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ