ಶುಕ್ರವಾರ, ಜನವರಿ 11, 2019

694. ಹನಿ-4

1. ಮತ್ಸ್ಯದ ಪದ

ನೀರಿನಲಿ ಕುಣಿಯುತ್ತಾ
ಬದುಕುತಲಿದ್ದೆ ಹಾಯಾಗಿ
ಸಾಗರಕೂ ಜನ ಚೆಲ್ಲಿ ವಿಷವ
ಕಸಿದುಕೊಂಡರು ಬಾಳ
ಅವರಿಲ್ಲ ನಿರಾಳ! ಹತಾಶೆಯಲಿ!
ನಮ್ಮ ಜೀವನ ಕರಾಳ!

2. ಮೀನು ನಾ

ನಿರಾಸೆಯಾಗಿದೆ ವ್ಯತ್ಯಾಸವಾದ
ನೀರ ಚಿಲುಮೆಯ ಸಾಗರದಿ,
ಮಾನವ ವಿಷಕಕ್ಕಿ ಹತಾಶೆಯಿಂದಲಿ
ನಿಸರ್ಗವ ಹಾಳುಗೆಡವಿ
ತಾ ಸತ್ತು ಬದುಕುತಲಿ
ಮತ್ಸ್ಯಗಳ ಬಲಿ ಪಡೆಯುತಲಿ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ