*ಭಾವಗೀತೆ*
*ಮೌನಭಾವ*
💐💐💐💐💐💐💐💐💐
ವಾವ್... ಶೀರ್ಷಿಕೆಯೇ ಕರೆದು ಕಾಡುತ್ತದೆ..ಸೂಪರ್ ಸೇ ಊಪರ್ ಹೇ....
💐💐💐💐💐💐💐
ಕಾಡುತ್ತಿಹುದು ಹೃದಯ ಭಾವವು,
ಸೋತಿಹುದು ಏಕಾಂಗಿ ಮನವು,,,
ನೀ ಬರದೇ,,ತಂಪಾಗದು ತನುವು,
ತಟದಲಿ ನಿಂದು ಮೌನದಲಿ ಮಿಂದಿರುವೆ,.
//ಪ//
💐💐💐💐💐💐💐
ಪಲ್ಲವಿಯಿದು ಆಹಾ ಏನಂದ! ಕಾಡುತಿದೆ ಹದಯದ ಭಾವ, ಅದಕೆ ಸೋತಿದೆ ಏಕಾಂಗಿ ಮನ.. ಪರ್ಸಾನಿಫೈಡ್ ಲೈನ್ಸ್ ವಂಡರ್ಫುಲ್ ಫೀಲ್!! ತಟದಲಿ ನಿಂದು, ಮೌನದಲಿ ಮಿಂದು. ...ಪ್ರಾಸಗಳ ಸಾಲು ಅದ್ಭುತ!ಕರೆಗೆ ನಲ್ಲ ಬರಲಾರದಿರನೇ...
💐💐💐💐💐💐💐
ಅರೆಬಿರಿದು ಅರಳಿದ ಶ್ವೇತದಲಿ,
ಭಾವ ಉಕ್ಕುವ ಹರೆಯವು,,,
ಬಯಸಿ ನಿಂದಿರುವೆ ಬಿಂದಿಗೆಯೊಳು
ಜಲದುಂಬಿದ ಕಾಮನೆಯಂತೆ ಪ್ರಾಯವು,,.
//೧//
💐💐💐💐💐💐💐💐
ಉದಾತ್ತ ಉಪಮೆಯುಕ್ತ ಸಾಲುಗಳಿವು...ಪ್ರಾಯವನ್ನು, ಕಾಮನೆಯನ್ನು ಜಲತುಂಬಿದ ಕೊಡಕ್ಕೆ, ಹೋಲಿಸಲಾಗಿದೆ.ಪ್ರಾಸಗಳ ಸಾಲೇ ಮೆರವಣಿಗೆ ಹೊರಟಂತಿದೆ. ವಾವ್...
💐💐💐💐💐💐💐💐
ನಿನ್ನೆದೆಯಲಿ ಪವಡಿಸಿ ಬಯಕೆ ಕರಗಿಸಿ ,
ಬಿಳಿ ಮೋಡದಲಿ ಬಾನಕ್ಕಿಯಂತೆ ತೇಲುವಾಸೆ,,
ಮೌನದಲಿ ಮೊಗವಿರಿಸಿ,,,ಕಾದ ಮನದೊಳು, ಕನವರಿಸುತ್ತಿರುವೆ ಇನಿಯನೆ ನಿನ್ನೊಲವಾಸೆ,.
//೨//
💐💐💐💐💐💐💐💐
ಪರ್ಸಾನಿಫಿಕೇಶನ್ ಮೊದಲ ಚರಣ, ಸಿಮಿಲಿ(ಉಪಮೆ) ಎರಡನೆ ಚರಣವಾದರೆ ಮೂರನೆ ಚರಣದ ಸಾಲುಗಳುಾ ಉಪಮೆಗೆ ಮೀಸಲಾಗಿವೆ. ಬಿಳಿ ಮೋಡದಲಿ ಬಾನಕ್ಕಿ.....ಅದಕ್ಕೇ ನೀವು ಗ್ರೇಟ್ ಅಂತ ಒಪ್ಪಿಕೊಳ್ಳಲೇ ಬೇಕು..ಬಯಕೆ ಕರಗಿಸಿ, ನಿದ್ದೆ ಪವಡಿಸಿ..ಆಸೆಗಳ ಬಿತ್ತರ...
💐💐💐💐💐💐
ಗೆಜ್ಜೆನಾದ ಹೆಜ್ಜೆಯಲಿ ಮೂಡೊ ಮುನ್ನ ಕೆಂಗುಲಾಬಿಯ ಅಪ್ಪ ಬಾರದೇಕೆ ನಲ್ಲ,,ನೇ,
ನಿರಾಭರಣಿಯ ನಲ್ಮೆ ಮೌನ ಕರಗೊ ಮೊದಲೆ, ಕೂಡಬಾರದೇಕೆ ಮೆಲ್ಲ,,,ನೇ,,.
//೩/✍ *ವಾಣಿ ಭಂಡಾರಿ*
ಕೆಂಗುಲಾಬಿಯ ಅಪ್ಪ? ಅರ್ಥವಾಗಲಿಲ್ಲ...ಅದು ಕೆಳಗೆ ಬಂದಿದ್ದರೆ ಚೆನ್ನಾಗಿತ್ತು, ನಿರಾಭರಣೆ ಆಗಬೇಕಿತ್ತು.. ಕೊನೆಯ ಸಾಲು ಎಡವಿದಂತೆ ಕಂಡಿತು ನನಗೆ....ಕೆಲವೊಂದು ಲೇಖನ ಚಿಹ್ನೆಗಳು ಅನಗತ್ಯ ಎನಿಸಿತು... ಕವನ ಚೆನ್ನಾಗಿದೆ. ಕವಿಭಾವಕ್ಕೆ ಧಕ್ಕೆಯಾಗಿದ್ರೆ ಕ್ಷಮಿಸಿರಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ