ಮಂಗಳವಾರ, ಜನವರಿ 15, 2019

710. ಮಕ್ಕಳ ಕವನ-8

ರವಿಮಾಮ

ಲೇಟಾಗಿ ಬಾರೋ ರವಿಮಾಮ
ಚಳಿಯಲು ಬೇಗನೆ ಏಳಬೇಡ
ನೀ ಬರಲು ಅಮ್ಮ ಕರೆಯುವಳೆನ್ನ
ಹೊದ್ದು ಮಲಗುವೆ ಸ್ವಲ್ಪ ತಾಳಪ್ಪ..//

ಉರಿ ಉರಿ ಕಿರಣವ ಬಿಡಬೇಡ
ಕಣ್ಣಿನ ಒಳಗೆ ಚುಚ್ಚಬೇಡ
ಚಂದಿರನಂತೆ ತಂಪಾಗು
ನಮ್ಮಯ ನೋಡಲು ಕೆಳಬಾಗು//

ದಿನಕರನಂತೆ ನಿನ್ನ ಹೆಸರು!
ಸೂರ್ಯನು, ಆದಿತ್ಯನು ನೀನಂತೆ!
ನಿನಗೆ ನಮಸ್ಕಾರ ಮಾಡಬೇಕಂತೆ
ನಮ್ಮಯ ಆರೋಗ್ಯ ಸುಧಾರಿಸುವುದಂತೆ//

ರವಿವಾರ ಬರಬೇಡ ರವಿಮಾಮ
ರಜೆಯನು ಪಡೆಯೋ ಓ ಮಾಮ
ಸಂಜೆಯ ಆಟ ಮುಗಿಯದೆ ಇರಲಿ
ಬೇಗನೆ ಸಾಗರಕೆ ಇಳಿಯಲು ಬೇಡ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ