ಗಝಲ್
ತಿಳಿದವರಿಂದ ಕಲಿತು ಬರಲಿ ಸಾಹಿತ್ಯ,
ತಬ್ಬಲಿಗಳ ಜೊತೆ ಬೆರೆಯಲಿ ಸಾಹಿತ್ಯ!!
ಮನದ ಭಾವಗಳ ಬಿಂಬಿಸಿ, ಕರೆಯಲಿ,
ಮೌಢ್ಯದ ಬಲೆಯ ಸರಿಸಲಿ ಸಾಹಿತ್ಯ!!
ಕದವ ತಟ್ಟಿ ಜನರ ಬಡಿದೆಬ್ಬಿಸಲಿ,
ಜಾತಿ ಮತಗಳ ದಬ್ಬಿ ಬಿಡಲಿ ಸಾಹಿತ್ಯ!!
ಉತ್ತಮ ಮೌಲ್ಯಗಳ ಉನ್ನತೀಕರಿಸಲಿ,
ಭವ್ಯ ಬಾಂಧವ್ಯ ಬೆಸೆಯಲಿ ಸಾಹಿತ್ಯ!!
ಬಡವ ಸಿರಿವಂತರ ನಡುವೆ ಬಿರುಕಾಗದಿರಲಿ,
ರಾಜಕೀಯಕ್ಕೆ ಅಂಟಿ ಬದಲಾಗದಿರಲಿ ಸಾಹಿತ್ಯ!
ಹೃದಯದ ಕೊಳೆ ತೊಳೆದು ಬಿಡಲಿ,
ಮನಸುಗಳ ಜೋಡಿಸಿ ಬಿಡಲಿ ಸಾಹಿತ್ಯ!!
ದ್ವೇಷ ಭಾವವ ಅಳಿಸಿ ಹಾಕಲಿ,
ಪ್ರೇಮ ಮಂತ್ರದ ಬೀಜ ಬಿತ್ತಲಿ ಸಾಹಿತ್ಯ!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ