ಶನಿವಾರ, ಜನವರಿ 12, 2019

702. ನಮ್ಮೂರು

ನಮ್ಮೂರು

ಲಲಾಲಲಾಲ ಲಲಾಲಲಾಲ
ನಮ್ಮೂರ ಸಿರಿಯ ನೋಡಿ..
ಸಿರಿ ಸಂಪತ್ತಿನ ಬೆಳೆಯ ನೋಡಿ..
ಬೆಟ್ಟಗಳ ಸಾಲು ಕೂಡಿ..
ಹಸಿ ಹಸಿರಾದ ಪರಿಸರ ನೋಡಿ//೧//

ಗಿಡಮರಬಳ್ಳಿಯ ಒಳಗಿಂದ
ಬರುತಿಹ ಗಾನವ ಕೇಳಿ..
ಪಶು ಪಕ್ಷಿ ಸಂತಸದಿಂದ
ಹಾಡುವ ಹಾಡನು ಕೇಳಿ..//೨//

ಮನದಲಿ ಶಾಂತಿಯ ಬಿತ್ತಿ
ಹೊಲದಲಿ ಬೀಜವ ಬಿತ್ತಿ
ಉತ್ತು ಬೆಳೆವ ರೈತರ ಜೋಡಿ
ನಡೆದಾಡುವ ನಾವೂ ಕೂಡಿ//೩//

ಹನಿಹನಿ ನೀರದು ಅಮೂಲ್ಯ
ವ್ಯರ್ಥವ ಮಾಡರು ತಿಳಿದು ಮೌಲ್ಯ
ಹಳ್ಳಿಯ ಜನಕಿದೆ ಪ್ರೀತಿ
ಬದುಕಿಹರು ಮರೆತು ಭೀತಿ//೪//

ಬೇಧ ಭಾವವೆಲ್ಲ ತೊರೆದು
ಬಂಧು ಬಾಂಧವರನೆಲ್ಲ ಕರೆದು
ತಾನು ತನ್ನದು ಎನದೆ
ಕೂಡಿ ಬಾಳುವರು ಕೂಡಿ ಕಲೆತು//೫//
ಲಲಾಲಲಾಲ ಲಲಾಲಲಾಲ
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ