ಗುರುವಾರ, ಜನವರಿ 3, 2019

674. ನ್ಯಾನೋ ಕತೆ-8

ನ್ಯಾನೋಕತೆ

ಬದಲಾಗಬಹುದು ಬದುಕು!

ರಾಣಿಗೆ ತನ್ನ ಬಗ್ಗೆ ಅಭಿಮಾನ! ತನ್ನ ಗಂಡ ತನಗೆ ಸರಿ ಸಮಾನನಲ್ಲ ಎಂದು ಕಾಲಿನ ಕಸದಂತೆ ಅವನನ್ನು ಜಾಡಿಸಿ, ಒದ್ದು ಕಳುಹಿಸಿದ ಮೇಲೆ ಅವ ಹೇಗೋ ಬದುಕು ಕಟ್ಟಿಕೊಂಡ! ರಾಣಿಯೆಂಬ ಹೆಸರಿಟ್ಟು ರಾಣಿಯಂತೆಯೇ ಬೆಳೆಸಿದ್ದ  ಅಪ್ಪ  ಕೂಡಿಯೂ ಇಟ್ಟಿದ್ದ! "ಸಮಾಜದಲ್ಲಿ ಹೇಗೂ ಬದುಕಬಲ್ಲೆ ಹಣವಿದೆ" ಎಂದು ಸೊಕ್ಕಿನಿಂದ ಬದುಕುತ್ತಿದ್ದವಳಿಗೆ ಶಾಲೆಗೆ ಮಗುವನ್ನು ಸೇರಿಸಲು ಪೋಷಕರಿಬ್ಬರೂ ಜೊತೆಯಾಗಿ ಬರಬೇಕು, ಅವರಗೂ ಕ್ಲಾಸ್ ಕೊಡೋದಿದೆ ಎಂದಾಗ ಅನಿವಾರ್ಯವಾಗಿ ಗಂಡನನ್ನು ಹುಡುಕುತ್ತಾ ನಡೆದಳು ಮಾಡರ್ನ್ ರಾಣಿ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ