ಪೋಸ್ಟರ್ ಹುಡುಗಿ
ದಾರಿಯ ಪಕ್ಕದ ಕಂಬದ ತುದಿಯಲಿ
ಚಿನ್ನದ ಜಾಹೀರಾತು ಒಂದಿತ್ತು..
ಚಿನ್ನವ ಧರಿಸಿದ ಅಂದದ ಹುಡುಗಿಯು
ನನ್ನೀ ಮೈಮನ ಮರೆಸಿತ್ತು..
ಅವಳನು ನೋಡಿ ತಣಿದಿಹ ಕಂಗಳು
ರಾತ್ರಿಯ ನಿದ್ದೆಗೆ ಜಾರಿದವು..
ಪೋಸ್ಟರ್ ಹುಡುಗಿಯು ಹೊರಗಡೆ ಬಂದು
ನಿಂತೇ ಬಿಟ್ಟಳು ನನ್ನೆದುರಲ್ಲಿ...
"ನೋಡಿ ನಾಚಿಹೆನನ್ನ ನೀ, ಮುಂದೆಯೇ ಬಂದಿರುವೆ!
ನನ್ನನು ನೋಡು ಕಣ್ಣನು ತಣಿಸು"
ಎನ್ನ ಬೇಕೆ ನನ್ನ ಕಿವಿಯಲ್ಲಿ!!
ವಾರೆವಾ.. ಎನ್ನುತ ನಾನು ಕಣ್ಣನು ಅರಳಿಸಿ ನೋಡುತಲಿ
ಬಂದಳು ನನ್ನ ಕನಸಿನ ರಾಣಿ
ಬಿಡದೆಯೆ ನೋಡಿದೆ ಮನಸಿನಲಿ..
ಕಣ್ಣದು ಪಾವನ, ಜೀವನ ದರ್ಶನ ಎನ್ನುತ ನಲಿದೆ ಹರುಷದಲಿ..
"ಬಾ ನನ್ನೊಲವೆ ಕುಳಿತುಕೋ ಇಲ್ಲಿ"
ಎನ್ನುತ ಕರವನು ಚಾಚುತ ಕರೆಯೆ
ಮಾಯವೆ ಆಗಿ ಪಟದೊಳು ಸೇರಿ
ನಗುತ್ತಿದ್ದಳು ಆ ಚೆಲುವಿನ ನಾರಿ!!
ಬೇಸರ ಬಂದು ಅಳುತಲಿ ಇದ್ದು
ಒಮ್ಮೆಲೆ ಯಾರೋ ಬಂದಂತಾಗಿ
ಮತ್ತೆ ಬಂದಳು ಎನ್ನುತ ಕಣ್ಗಳ ತೆರೆಯಲು
ಅಮ್ಮನ ಉದ್ದದ ಬೆತ್ತವು ನನ್ನಯ
ಸಣ್ಣ ಬೆನ್ನಿನ ಮೇಲೆ ನಾಟ್ಯವನಾಡಿತ್ತು!!!
ನೋವಿನ ಕಾವಿಗೆ ಹುಡುಗಿಯ ನೋಡಿದ
ಮಾತನು ಆಡಿದ ಕನಸಿನ ಸಿಹಿಯು
ಮಾಯವೆ ಆಗಿತ್ತು, ಬೆನ್ನು ಭಯಂಕರ ನೋಯ್ತಿತ್ತು!!!
@ಪ್ರೇಮ್@
2.3.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ