ಮಲೆನಾಡ ಅಂದ
ಮಲೆನಾಡ ಮುದ್ದು ಮನಸಿಗೆ
ಮನದಾನಂದಕೆ ಕೊರತೆಯೇ?
ಹರಿವ ಝರಿ, ಅರಳೊ ಸುಮ
ಕೊರೆವ ಚಳಿ, ಬರೆವ ಮನ!!
ಬೆಟ್ಟ ಗುಡ್ಡ ಸಾಲು ಸಾಲು
ಮರದ ಬುಡವೂ ಟಪಾಲು!!
ಬಣ್ಣ ಬಣ್ಣ ಚಿಟ್ಟೆ ಗುಂಪು
ಕೆರೆಯ ಒಳಗೆ ಮರದ ಜೊಂಪು!!
ಬೆಳ್ಳಕ್ಕಿಯ ಮೆರವಣಿಗೆ
ಹಬ್ಬದೂಟ ಕಣ್ಣಿಗೆ!
ಮರದೆಲೆಯಲಿ ಕೋಗಿಲೆ ಹಾಡು
ಮೇಲೆ ಹಣ್ಣು ಹೂವ ನೋಡು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ