ಗಝಲ್-71
ಈ ಭೂಮಿಯೊಳಗೆ ನಾವು ಬಂದ ಸಮಯವದು ಅನಿರೀಕ್ಷಿತ.
ನಾಲ್ಕಾರು ಜನಕೆಲ್ಲ ಸಹಕಾರಿಯಾಗಿ ಬದುಕುವುದು ಅನಿರೀಕ್ಷಿತ.
ಸುಳ್ಳು ಮೋಸ ವಂಚನೆಗಳ ಹೆಣೆದು ಗೂಡು ಕಟ್ಟಿಡುವೆವು,
ಸತ್ಯ,ಕರುಣೆ,ಪ್ರಾಮಾಣಿಕತೆ ಉಳಿಸಿ ಹೋಗುವುದು ಅನಿರೀಕ್ಷಿತ.
ಹೊಂದಾಣಿಕೆಯಾಗದೆ ಮನಮುರಿದು ನಿಶ್ಶಬ್ದರಾಗುವೆವು ಹಲಬಾರಿ.
ಕೆಸರಿಗೆ ಕಲ್ಲು ಹಾಕದೆಯೇ ಸುಮ್ಮನೆ ಬಾಳುವುದು ಅನಿರೀಕ್ಷಿತ!!
ಮರಹುಟ್ಟಿ ಸಾಯುವಾಗ ಹೂಹಣ್ಣು, ನೆರಳ ದಾನದ ಪುಣ್ಯವಿಹುದು.
ಮನುಜನ ಕೊನೆಗಾಲದವರೆಗೆ ಧರ್ಮದ ಬದುಕ ನಡೆಸುವುದು ಅನಿರೀಕ್ಷಿತ.
ಇತರರ ಒಳಿತನು ಬಯಸುವವ ಮೇಲೇರುವ ಪ್ರತಿದಿನ ಜಗದಿ.
ಪರರಲಿ ಹುಳುಕ ಕಾಣುವವ ನರ ಹುಳುವಾಗುವುದು ಅನಿರೀಕ್ಷಿತ.
ಪ್ರಾಣಿ ಬುದ್ಧಿಯ ಬಿಸುಟು ಮಾನವತೆಯ ದೀಪ ಹಚ್ಚಬೇಕಾಗಿದೆ.
ವೈರತ್ವದಿ ನೀಚ ಕಾರ್ಯವ ಮಾಡಿ ನರಕವನನುಭವಿಸುವುದು ಅನಿರೀಕ್ಷಿತ.
ಧರಣಿಯೊಳುತ್ತಮದಿ ಉಸಿರಾಟ ನಡೆಸಿಕೊಂಡು ಬರಬೇಕು.
ಪ್ರತಿ ಉಸಿರಲಿ ನಿಶ್ಕಲ್ಮಷ *ಪ್ರೇಮ* ತುಂಬಿರಬೇಕಾದುದು ಅನಿರೀಕ್ಷಿತ!!
ಧರ್ಮ=ಮಾನವತೆಯ ಧರ್ಮ
ಉಸಿರಾಟ=ಬದುಕು
@ಪ್ರೇಮ್@
21.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ