ನಾನು
ನಾನು ನಾನಾಗಿರಲು ಹೇಗೆ ಸಾಧ್ಯ?
ನೀನು ಅವನು ಅವರು ಬಂದಾಗಲಲ್ಲವೇ?
ನಾನು ನಾನಾಗಲು ನೀನು ಸಹಕರಿಸಬೇಕು!!
ನಾನು ನಾನಾಗದೆ ನೀನಾದರೆ ಬೆಲೆಯಿಹುದೇ?
ನಾನು ನಾನಾಗಲು ನಿನ್ನ ಅವನ, ಅವರ ಸಹಾಯ ಬೇಕು!!
ನಾನು ನಾನಾಗಿರಲು ಸುಲಭವಿಲ್ಲ!
ಒತ್ತಡ ಹೇರುವ ತಂತ್ರಜ್ಞಾನ ಬಿಟ್ಟಿರಬೇಕು!
ಅಂಟಿಕೊಂಡಿರುವ ಸಂಬಂಧಗಳ ದೂರ ಒಗೆಯಬೇಕು...
ನನ್ನ ಮನಸು ಸದಾ ದೃಢವಾಗಿರಬೇಕು
ಹೃದಯ ಪೂರ್ತಿ ಶುದ್ಧವಾಗಿರಬೇಕು
ವಿಶ್ವಮಾನವತೆಯ ಸಂದೇಶ ಸಾರುವಂತಿರಬೇಕು..
ಹಣ, ಆಸ್ತಿ, ಸಂಬಂಧಗಳ ಸಂಕೋಲೆಯ ಬಿಟ್ಟಿರಬೇಕು...
ವಿಶ್ವವ ತನ್ನ ಮನೆಯೆನಬೇಕು..
ಜಗತ್ತು ತನ್ನ ಕುಲವೆನಬೇಕು..
ತನ್ನದಾದುದೇನೂ ಇರಬಾರದು?
ಆಗಲೇ ನಾನು ನಾನಾಗುವೆ, ನೀನು ನೀನಾಗುವೆ..
ಎಲ್ಲರ ಮನೆ, ಮನ ಜೈಸುವೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ