ಶುಕ್ರವಾರ, ಮಾರ್ಚ್ 1, 2019

820. ನಾ ಒಂಟಿ

ನಾ ಒಂಟಿ

ಜೀವನದಾಟವು ಮುಗಿಯುವ ಹಂತ
ಆಸ್ತಿ ಪಾಸ್ತಿ ಇಹುದು ಸ್ವಂತ
ಹಣ ಒಡವೆಯೆಲ್ಲ ಯಾರಿಗೆ ಬೇಕು
ಬದುಕ ಸಂಗಾತಿಯ ಸಹಾಯವು ಬೇಕು..

ಬೇಕಿದೆ ಮೊಮ್ಮಕ್ಕಳ ಪ್ರೀತಿಯ ಆಟ
ತಾತ್ಸಾರವಿಲ್ಲದ ನಮ್ಮ ಮಕ್ಕಳ ನೋಟ
ರುಚಿಕರವಾದ ಸೊಸೆ ಬಡಿಸುವ ಊಟ
ಇರಬಾರದಿತ್ತು ಸೊಳ್ಳೆಯ ಕಾಟ..

ಪೂಜೆ ಭಜನೆ ಮನೆಯೊಳಗಿಟ್ಟೆ
ಸಮಯವ ಕಳೆಯಲು ಊರಿನ ಕಟ್ಟೆ
ಒಂಟಿಯಾಗಿ ಕುಳಿತರೆ ನಾ ಕೆಟ್ಟೆ
ಅದಕಾಗೆ ಓದಲು ಪುಸ್ತಕ ತಂದಿಟ್ಟೆ...

ಊರಲಿ ನನಗೆ ಗೌರವ ಪುರಸ್ಕಾರ
ಮನೆಯ ಎಲ್ಲರ ಕಣ್ಣಲಿ ತಾತ್ಸಾರ
ತೆರೆಯಲಿ ಬೇಗ ಸ್ವರ್ಗದ ದ್ವಾರ
ಹೊರಡುವೆ ದೇವನ ವಿಧಿಯ ಅನುಸಾರ...
@ಪ್ರೇಮ್@
01.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ