ಭಾನುವಾರ, ಮಾರ್ಚ್ 3, 2019

826. ಅಳು ನುಂಗಿ ನಗುವ ಸಮಯ

ಅಳು ನುಂಗಿ ನಗುವ ಸಮಯ

ಅಳ್ಬಾರ್ದು ಅಂತ ನಾ  ಅಂದ್ಕೊಂಡಿದ್ದೆ
ಅಪ್ಪನ ಪ್ರೀತಿ, ಅವ್ವನ ಊಟ
ನಿಮ್ಜೊತೆ ಕಳೆದ ಆಟ-ಪಾಠ
ಜಗಳದ, ಹೊಂದಾಣಿಕೆಯ ಸಮಯ
ಹೋಗಲಿ ಹೆಂಗೆ ಮನೆ ಮನ ತೊರೆದು..

ಹೋಗೆ ಹೋಗೆ ಗಂಡನ ಮನಿಗೆ
ಸೀರಿಯ ಹೊಸದ ಕೊಡಿಸಿವ್ನಿ ನಿನಗೆ
ಒಟ್ಟಿಗಿ ಕಲೆತ ಕ್ಷಣವನು ಮರೆಯದೆ
ಕಷ್ಟಕೆ ಈ ಅಣ್ಣನ ನೆನೆಯೆ..

ನಮ್ಮನೆ ಬಳ್ಳಿಯ ಹೂವದು ಅರಳಿದೆ
ದೇವರ ಪಾದವ ಸೇರುವ ಸಮಯ
ಅಳು ನುಂಗಿ ನಗುನಗುತಲಿ ನಾವು
ಸೇರಿದ ಮನೆಗೆ ಕಳುಹಲೆ ಬೇಕು..
ನಮ್ಮನೆ ನಿಮ್ಮನೆ ಎರಡೂ ಬೆಳಗಮ್ಮ ಮಗಳೆ..

ನಾನೇ ನೆಟ್ಟ ಗುಲಾಬಿ ಗಿಡವೆ
ನನ್ನನೆ ಕಾವ ನಾಯಿಯ ಮರಿಯೆ
ಕುಣಿಕುಣಿದಾಡುವ ಆಕಳ ಕರುವೆ
ನಾ ನಿಮ್ಮೊಡನಿರುವೆ ಎಂದೇ ತಿಳಿಯಿರಿ..
ಹೋಗಿ ಬರಲು ಅನುಮತಿ ನೀಡಿರಿ...
@ಪ್ರೇಮ್@
04.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ