ಬುಧವಾರ, ಮಾರ್ಚ್ 6, 2019

829. ದೇವರ ಮನದಲಿ

ದೇವನ ಮನದಲಿ

ಅವ ಬೇಡುವ ಇವನ ಕೊಲ್ಲೆಂದು
ಇವ ಕೇಳುವ ನೀನೇ ಗತಿ ನನ್ನ ಉಳಿಸೆಂದು
ದೇವರ ಗೊಂದಲ ಕೇಳುವರಾರು
ಅವನನು ಇವನನು ತಿದ್ದುವರಾರು?

ತನ್ನತನದಲಿ ಬದುಕುವ ಇವನು
ಪರರಿಗೆ ಉಪಕಾರಿಯಾದವ ಅವನು
ತನ್ನ ಜೀವನಕೆ ಹೋರಾಡುವ ಇವನು
ಪರರಿಗೆ ಜೀವವ ಕೊಡುವವ ಅವನು..

ಅವನನು ಇಟ್ಟರೆ ಇವನಿಗೆ ತೊಂದರೆ
ಇವವನನು ಬಿಟ್ಟರೆ ಅವನಿಗೆ ಸಂಕಟ
ಎಲ್ಲರೂ ತನ್ನಯ ಮಕ್ಕಳೆ ಆದರೂ
ಮೇಲು ಕೀಳಾಗಿ ಬಾಳಿಸ ಬೇಕು..

ನಿನ್ನಯ ಗುಣವದು ನಿನಗೇ ಕಾವಲು
ಉತ್ತಮ ಗುಣದಲಿ ಮೇಲಕೆ ಏರುವೆ
ನೀನೆ ತಯಾರಿಸಿದ ಹಣವದು ವ್ಯರ್ಥ
ಧನ ಕನಕವು ನಿನ್ನ ಗುಣದಲೆ ಅಡಗಲಿ...

ಮನದಲಿ ಹಿತವನು ಬಯಸುವವ ಶ್ರೇಷ್ಠ
ಪರರಿಗೆ ಕೆಡುಕನು ತರುವವ ನೀಚ
ನಿನ್ನಯ ಮನಸಿಗನುಗುಣವಾಗಿ ನೀಡುವ
ದೇವನ ಒಲವದು ಸರ್ವಗೆ ಮೀಸಲು...
@ಪ್ರೇಮ್@
06.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ