ಮಂಗಳವಾರ, ಮಾರ್ಚ್ 26, 2019

881. ಶಾಕುಂತಲೆ

ಶಾಕುಂತಲಾ

ಉಂಗುರವ ತೊಡಿಸಿಹನು ಪ್ರಿಯಸಖ
ಬರುವೆನೆಂದವನು ಬರಲೇ ಇಲ್ಲವಲ್ಲ!
ಎಷ್ಟು ದಿನ ಕಾಯಲಿ ಅವನಿಗಾಗಿ?
ಈ ಕಾಯುವಿಕೆ ತಂದಿದೆ ನರಕದನುಭವ!

ಪ್ರೀತಿಯ ಮರೆವು ಹೀಗೆ ಬರುವುದೇ..
ತನ್ನ ಪೋಷಕರ ಕರೆತರುವೆನೆಂದನಲ್ಲವೇ?
ರಾಜಕುಮಾರ, ವೈಭೋಗದಲಿ ನನ್ನ ಮರೆತನೇ?
ಬಡವಿ ನಾನು ಆಶ್ರಮದಿ, ಮೋಸ ಹೋದೆನೇ?

ನನ್ನ ಬಾಳು ನನ್ನಿಂದಾಗಿಯೇ  ಒಂಟಿಯಾಯಿತೇ?
ಮನ ಮೆಚ್ಚಿದ ಪ್ರಿಯತಮನು ನೆನೆಯದೆ ಹೋದನೇ?
ಬೇರೆ ಹುಡುಗಿಯ ನೋಡಿ ನನ್ನ ನೆನಪಾಗಲಿಲ್ಲವೇ?

ನನ್ನ ಹೃದಯದ ವೀಣೆ ನೀನು,
ನನ್ನ ರಾಜ್ಯದಿ ರಾಣಿ ಎಂದವ,
ತನ್ನ ವಚನವ ಮರೆತು ನನ್ನನು
ಕರೆತರಲು ಬಾರದ ದುಷ್ಯಂತನವ...

ಕ್ಷಮಿಸಲಾರೆ ನಾನವನನು, ಕಟ್ಟಿಬಿಡುವೆ ಪ್ರಮೀಳಾ ರಾಜ್ಯವ!
ಬದುಕ ಸಾಗಿಸೆ ಅವನಿರದಿರೆ ಸಾಧ್ಯ!
ನಾರಿ ಸಾಧಿಸಬಲ್ಲಲೆಂಬುದ ತೋರಿಸುವೆ..
ಋಷಿ ಕುಟೀರದಲಾನು ಪರರಂತಾಗಲಾರೆ..

ಬರದಿರಲಿ ಬರಲಿ ಮಗನ ಬೆಳೆಸುವೆ,
ನಾನೇ ರಾಜ್ಯಕೆ ಹೋಗಿ ಕೇಳಿಕೊಳ್ಳುವೆ..
ಮರೆವ ಕಾರಣವ ತಿಳಿದುಕೊಳ್ಳುವೆ..
ಧೈರ್ಯದಿಂದ ಮುನ್ನುಗ್ಗಿ ನಡೆವೆ..
@ಪ್ರೇಮ್@
26.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ