ಶನಿವಾರ, ಮಾರ್ಚ್ 2, 2019

824. ಕಲೆ

ಕಲೆ

ಕಲೆಗಿಲ್ಲವೆ ಬೆಲೆ ಎಲೆತುದಿಯ ಸವಿಮುತ್ತಿನಂತೆ
ತಲೆಯಿಲ್ಲದ ಜೀವಕೆಲ್ಲಿದೆ ಕಳೆ!!
ಪಕಳೆಯಲ್ಲವೇ ಹೂವಿನಂದ?!
ಹಳೆಯದೆಲ್ಲವ ಮರೆತರಲ್ಲವೇ ಹೊಸತನದ ಅಂದ!

ಅಬಲೆ ಸಬಲೆಯರಲ್ಲು ಇರಬೇಕು ಕಲೆ
ಮಲೆನಾಡು ಕರಾವಳಿಗೂ ಅದರದೇ ಇದೆ ಕಲೆ
ಬಯಲು ಸೀಮೆಯಂತೂ ಬೆಳೆದಿದೆ ಜನಪದರ ಕಲೆಯ ಸಿರಿಯಲೆ..
ನವವಸಂತಕೂ ತನ್ನದೇ ಕೊಳೆ ತೆಗೆದ ಕಳೆ!!

ಹಳೆ ಬೇರು ಹೊಸ ಚಿಗುರಲೂ ಕಲೆ
ಶಿಲ್ಪ ಕವನ ಕೆತ್ತನೆ ನಾಟ್ಯ ನೃತ್ಯ ಗೆರೆಯಲೂ ಕಲೆ
ಯಾವ ಎದೆಯೊಳಗೆ ಇರಬಹುದು ಅದೆಂತಹ ಕಲೆ
ಹುಡುಗಿ ಗೆದ್ದವಗೆ ಸಾಹಸದ ಕಲೆ..

ಯೋಧರಿಗೆ ಯುದ್ದಕಲೆ ಸರ್ವರಿಗೆ ಬುದ್ಧಿ ಕಲೆ
ಪರಹಿತ ಪರೋಪಕಾರ ಸರ್ವ ಕಲೆಗಳ ಕಲೆ....
ಎಲ್ಲೂ ಎಂದೂ ಮಾಡದಿರಿ ಕಲೆಯ ಕೊಳೆ
ನಿಮ್ಮಲಿರಲಿ ಕಲೆಯಲಿ ಆಸಕ್ತಿಯ ಹೊಳೆ
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ