ಭಾವದೊಲುಮೆ
ಬರದಂತೆ ಬಂದೆ ಬಾಳಲ್ಲಿ ಬಿರುಕು!
ಮನದಲ್ಲೆ ನಿಂದೆ ಮರೆಮಾಚಿ ಮುಸುಕು//ಪ//
ನಿಜ ನೀನು ನನಗೆ ನವಿಲಂತೆ ಚಿನ್ನ,
ತಂಗಾಳಿ ತಂದೆ ತಂಪಾಗಿ ರನ್ನ.
ಹಗುರಾದ ಹನಿಯಂತೆ ಹಾಯಾಗಿ ಹರಡಿ,
ಬದುಕಲ್ಲಿ ಬಂಗಾರ ಬರುವಂತೆ ಬಂದೆ//೧//
ನೀನಿರಲಿ ಸುಖವು ನಿನ್ನಿಂದ ಒಲವು,
ನಿನ್ನಿರಲವೇ ಚೆಲುವು, ಮೈಮನದಲ್ಲಿ ಬಲವು..
ಪ್ರಿಯೆ ಪದರವಾಗಿ ಪಸರಿಸಿಯೆ ನೀನು,
ಗತಿ ನೀನೆ ಗ್ರಹಿಸು ಈ ಹೃದಯದ ನೋವು//೨//
ವಸಂತನಂತೆ ನೀ ಚಿಗುರಿಸ ಬಂದೆ,
ಕನ್ನಡಿಯ ಹಾಗೆ ನನ್ನ ಬಿಂಬವ ತಂದೆ.
ನನ್ನುಸಿರಿನ ಉಸಿರೇ, ನನ್ನ ಬಾಳ ಹಸಿರೇ,
ಬಾಳಪಯಣದಲಿ ನೀ ಪ್ರೀತಿಯ ಹೆಸರೇ //೩//
ಮನದೊಳಗಿನ ಪುಷ್ಪ ಅರಳಿತು ನಿನ್ನಿಂದ!
ಸವಿಭಾವದೊಲುಮೆ ಬೆಳಗಿತು ಮುದದಿಂದ!!
ಸರಸದಲಿ ವಿರಸದಲಿ ರಸಕ್ಷಣದಿ ತೇಲಿ!
ಸಂತಸವು ಸಂಭ್ರಮವು ನಿತ್ಯ ಬಾಳಲ್ಲಿ...//೪//
@ಪ್ರೇಮ್@
01.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ