ಗಝಲ್-72
ಉಡುವ ಬಟ್ಟೆ ತುಂಡರಿಸುತ ಮರೆಯುತಿಹೆವು ಸಂಸ್ಕೃತಿ.
ಮೈಮಾಟದ ಪ್ರದರ್ಶನವೀಯುತ ಮರೆಯುತಿಹೆವು ಸಂಸ್ಕೃತಿ.
ಹಣೆಯ ಕುಂಕುಮ, ಕೊರಳ ತಾಳಿ ಮಾಯವಾಗಿದೆ ಎಂದೋ,
ಹೊರಗಿನ ವೇಷಕೆ ಮಣೆಯ ಹಾಕುತ ಮರೆಯುತಿಹೆವು ಸಂಸ್ಕೃತಿ....
ಕೈಬಳೆಗಳ ದೂರಕೆಸೆದು, ಕಾಲುಂಗುರ ಬದಿಗೆ ಸರಿಸಿ,
ಗಾಂಧಿ ಕಾಲದ ವೇಷವೆನುತ ಮರೆಯುತಿಹೆವು ಸಂಸ್ಕೃತಿ...
ಕುಡಿತದಮಲಲಿ ತೇಲುತ್ತಲಿ, ಮೈಮಾಟವ ತೋರಿಸುತ್ತಿಹೆವು.
ಹಿರಿಯರನ್ನು ಆಶ್ರಮಕೆ ತಳ್ಳುತ ಮರೆಯುತಿಹೆವು ಸಂಸ್ಕೃತಿ...
ಬದಿಯ ಮನೆಯವನ ನೋಡದೆ, ಜಂಗಮನ ಹಿಡಿದು ಹರಟುತ್ತಿರುವೆವು,
ಅಪಘಾತದಲ್ಲೂ ಚಿತ್ರ ಕ್ಲಿಕ್ಕಿಸುತ ಮರೆಯುತಿಹೆವು ಸಂಸ್ಕೃತಿ..
ಸಡಗರದಿ ಬಣ್ಣದ ಸಿಹಿಯ ಕುಡಿದು, ವೇಗದ ,ರುಚಿಯ ಖಾದ್ಯ ತಿನ್ನುವೆವು.
ಸಾಂಪ್ರದಾಯಿಕ ಅಡಿಗೆ ಬಿಸುಟುತ ಮರೆಯುತಿಹೆವು ಸಂಸ್ಕೃತಿ..
ಅಪ್ಪ ಹಾಕಿದ ಆಲದ ಮರ, ಅಕ್ಕಮಹಾದೇವಿ ಕಾಲ ಬೇಡವೆನುವೆವು,
ಸಿಕ್ಕ ಸಿಕ್ಕ ವಿದೇಶಿ ವಸ್ತು ಕೊಳ್ಳುತ ಮರೆಯುತಿರುವೆವು ಸಂಸ್ಕೃತಿ...
@ಪ್ರೇಮ್@
22.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ