ಶನಿವಾರ, ಮಾರ್ಚ್ 16, 2019

861. ಕವನ(ಭಾವಗೀತೆ)-ಚಂದಿರ ನಕ್ಕಾಗ

ಚಂದಿರ ನಕ್ಕಾಗ..

ನೋಡಿದೆ ಕಣ್ಣನು ತೆರೆಯುತ ನಭದಿ
ಚಂದಿರ ನಗುತಲಿ ನಿಂದಿಹ ಹರುಷದಿ
ಹುಣ್ಣಿಮೆಯಾ ದಿನ ಕಂಪನು ಚೆಲ್ಲುತ
ಸೂರ್ಯನ ಬಳಿಯಲಿ ಎರವಲು ಪಡೆಯುತ..

ಹಗಲಿಗೆ ರವಿಯು ಇರುಳಲಿ ತಾನು
ಚುಕ್ಕೆಯ ಜತೆಯಲಿ ಸಡಗರ ತಾನೇ!
ಮೇಲೇರುತಲಿ ಇತರರ ಬಾಳಲಿ
ಬೆಳಕನು ಚೆಲ್ಲುತ
ಹಲವರ ದಣಿವಿಗೆ ಸಾಂತ್ವನ ನೀಡುತ...

ಶಾಶ್ವತವಲ್ಲವು ಸುಖಮಯ ಜೀವನ
ಹುಣ್ಣಿಮೆ ಹಿಂದೆಯ್ ಅಮವಾಸ್ಯೆಯಾಗಮನ!!
ನಿಲ್ಲದ ಆಟವು ಬಾಳಲಿ ಬರುವುದು.
ಆಟಕೆ ಆಟಿಕೆ ತಾನೇ ತರುವುದು..

ಚುಕ್ಕಿಯ ಜತೆಯಲಿ ಸೋಮನು ನಕ್ಕ!
ಪಕ್ಕದ ಮನೆಯಲೆ ಸೆರೆಗೆ ಸಿಕ್ಕ!
ಚಂದಿರ ಏರನು ಮನೆಯ ಮೇಲೆ
ಕಾರಣ ಮನುಜರ ಸ್ವಾರ್ಥದ ಲೀಲೆ....
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ