ಬುಧವಾರ, ಮಾರ್ಚ್ 20, 2019

871. ಸಮಯದೊಂದಿಗೆ

ಸಮಯದೊಂದಿಗೆ...

ಒಂದುಕ್ಷಣ ನೆನಪಿಸಿದೆ ನನ್ನ ಹುಟ್ಟನು ಅದೂ ಸಮಯದೊಂದಿಗೆ..
ನಾ ಮೊದಲು ಅತ್ತ ಘಳಿಗೆ ಅಮ್ಮನ ನಗುವಿನೊಂದಿಗೆ...

ತಿರುಗಿ ಬೀಳಲು, ಮುಂದೆ ತಂವಳಲು, ಕೂರಲು
ಹಿಡಿದು ನಿಲ್ಲಲು, ಕುರ್ಚಿ ಏರಲು, ನಡೆದಾಡಲು
ಎಲ್ಲವ ನಾ ಕಲಿತೆ ಸಮಯದೊಂದಿಗೆ..

ಓಡುವುದು ಜೀವನದ ಪಾಠವಾಯಿತು.
ಶಾಲೆಗೆ ಓಟ ನಿತ್ಯದ ಆಟವಾಯಿತು.
ಸಕಲ ಕೆಲಸ ಆರಂಭವಾಯಿತು ಸಮಯದೊಂದಿಗೆ..

ಮನವದು ಆಲೋಚಿಸ ತೊಡಗಿತು.
ಗೆಳೆಯರು ಬಂದೆನ್ನ ಸೇರಿಕೊಂಡರು.
ಮಾತು,ಹರಟೆ, ಕಲಿಕೆ ಸಾಗಿತು ಸಮಯದೊಂದಿಗೆ...

ಕೆಲಸ ಕಾರ್ಯವೂ ಬದುಕಿಗೆ ಬೇಕಿತ್ತು!
ಹಣದ ಅವಶ್ಯಕತೆಯೂ ಬಹಳವೇ ಇತ್ತು!
ನಾಲ್ಕಾರು ಮಕ್ಕಳಿಗೆ ವಿದ್ಯಾದಾನದ ಮಹತ್ವ ತಿಳಿಯಿತು ಸಮಯದೊಂದಿಗೆ..

ಪದಗಳೊಡನಾಟವಾಡುವ ಮನಸಾಯಿತು.
ಪದ ಹೆಣೆಯೆ ಕವನದ ಸಾಲು ಮೂಡಿ ಬಂತು!
ಬರವಣಿಗೆ ತಾನೇ ತಾನಾಗಿ ಒಲಿಯಿತು ಸಮಯದೊಂದಿಗೆ..
@ಪ್ರೇಮ್@
20.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ