ನಾವು ಶುಶ್ರೂಷಕಿಯರು..
ತನ್ನ ನೋವ ಮರೆತು
ಪರರ ನೋವ ತಗ್ಗಿಸುವ
ತನ್ನ ಕೆಲಸ ತೊರೆದು
ಪರರ ಆರೋಗ್ಯ ವೃದ್ಧಿಸುವ
ನಾವು ಶುಶ್ರೂಷಕಿಯರು...
ಮನೆಯಾದರೇನು ಕಛೇರಿಯಾದರೇನು
ನೋವು ಬರಲು ಸ್ಥಳವುಂಟೇ
ನನ್ನ ಅಗತ್ಯ ಬೀಳಬಹುದು
ದಿನದ ಇಪ್ಪತ್ತನಾಲ್ಕು ಗಂಟೆ!!
ನೋವು ಬರಲು ನಾವೇ ಬೇಕು
ವೈದ್ಯರಿಗೂ ನಮ್ಮ ಸಹಾಯ ಬೇಕು
ಬಿಳಿಯಲೆಂದೂ ನಾವು ಶುಭ್ರ
ಸಹೋದರಿಯೆಂದು ನಮ್ಮ ಹೆಸರ..
ಸಾಂತ್ವನವು ನಮ್ಮಿಂದ
ನೋವು ಮರೆಸೋ ಕಾರ್ಯ ಅಂದ
ಪರರ ಹಿತದ ಬಯಕೆ ಚಂದ
ನಾವು ಶುಶ್ರೂಷಕಿಯರು...
@ಪ್ರೇಮ್@
16.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ