ಪೆನ್ನಿನ ಜೊತೆಗೆ
ನೀ ನನ್ನ ಜೊತೆಗಿರಲು
ಕಾಗದವ ನಾನು ಹಿಡಿದಿರಲು
ಪೆನ್ನೇ.....ನೀನೇ ನನ್ನ ಜೀವದ ಗೆಳೆಯ
ನೀನಿರಬೇಕು ನನ್ನಯ ಸನಿಹ...
ಏನಿಹುದು ನಿನ್ನೊಳು ರಹಸ್ಯ
ನನ್ನಯ ಬದುಕಿನ ಭವಿಷ್ಯ
ಬರೆವವನು ನೀನಲ್ಲವೇ.....
ನನ್ನೆದೆಯಾ ಮೆಟ್ಟಿ ಅಕ್ಷರಗಳಾ ಕಟ್ಟಿ...
ಮೆದುಳಿನ ಭಾವವ ಹಿಡಿದವನಲ್ಲವೇ....
ನೀಲಿಯ ಬಣ್ಣವು ನಿನ್ನದು
ಬರಹಗಳ ಸಾಲು ನನ್ನದು
ಜೀವದ ಗೆಳೆಯನು ನೀನೇ..
ಭಾವನೆಗಳ ಹಂಚುವ ಸರದಾರನು ನೀನೆ...
ಕಲಿತೆನು ನಿನ್ನಯ ಜೊತೆಗೆ
ಬೆರೆತ್ಹೋದೆ ಬಾಳಿನ ಒಳಗೆ
ಮುಳುಗಿದೆವು ಪದಗಳ ಬಲೆಗೆ
ನೀನೆನಗೆ ಆಸರೆ ಕೊನೆಗೆ...
@ಪ್ರೇಮ್@
11.03.2019
ರತ್ನಾ ಬಡವನಳ್ಳಿ ತಿದ್ದಿದ ಬಳಿಕ
ಪೆನ್ನಿನ ಜೊತೆಗೆ
ನೀ ನನ್ನ ಜೊತೆಗಿರಲು
ಕಾಗದ ನಾ ಹಿಡಿದಿರಲು
ಪೆನ್ನೇ.....
ನೀ ಎನ್ನ ಜೀವದ ಗೆಳೆಯ
ತೆರೆದಿಡುವೆ ನನ್ನೀ ಹೃದಯ...
ಏನಿಹುದು ನಿನ್ನೊಳು ಮಾಯೆ
ನೀನಾಗು ಮನಸಿನ ಛಾಯೆ
ಬರೆವವನು ನೀನಾದರೆ
ಭಾವ ನೀಡುವವ ನಾನಲ್ಲವೇ....
ನೀಲ ವರ್ಣವು ನಿನ್ನದು
ಬರಹದ ನಿಲುವು ನನ್ನದು
ಭಾವನೆಗಳ ಬಿತ್ತುವವ ನಾನೇ
ಹಂಚುವ ಸರದಾರನು ನೀನೆ...
ಕಲಿತೆ ನಿನ್ನಯ ಜೊತೆಜೊತೆಗೆ
ಬೆರೆತಿಹೆ ಈ ಬಾಳಿನೊಳಗೆ
ಸಿಲುಕಿಹೆ ಅರಿಯದ ಸುಳಿಯೊಳಗೆ
ರಹಸ್ಯ ಬಿಡಿಸಲಾಸರೆ ನೀನೆನಗೆ...
@ಪ್ರೇಮ್@
11.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ