ಸಂತಸದಿಂದಿರು..
ನನ್ನೊಲವಿನ ನವಿಲೆ
ಗರಿಗೆದರುತ ಕುಣಿಯೆ
ಮನದಾಳದಾನಂದ
ಉಳಿಸುತಲಿ ದಿನದಿನದಿ..
ಜಗವಿದು ನೋಡು
ಬದಲಾಗುತಲಿದೆ ವೇಗದಿ
ಬದಲಾಗಬೇಡ ನೀನು
ಸಮಯದ ತೆರದಿ...
ಭಾವನೆ ಮೂಡುವ
ಭರದಲಿ ಬೇಗನೆ
ಭವಸಾಗರ ದಾಟುವ
ಧಾವಂತವು ಬೇಡ..
ದಿನವದು ಬಾಳಲಿ
ಬರಲಿದೆ ನೋಡಾ..
ಜೀವನ ಅರೆಕ್ಷಣ
ಖುಷಿಯಲಿ ಬದುಕು.
ನಾಳೆಯು ಏನೋ
ನಾಳೆಯೆ ಹುಡುಕು.
@ಪ್ರೇಮ್@
24.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ