ಶುಕ್ರವಾರ, ಮಾರ್ಚ್ 15, 2019

858. ಸತಿ

ನೀನು

ಸತಿಯೆ ನಿನ್ನ ಕಾರ್ಯ ಕಂಡು
ಹೃದಯ ಬಾಗಿ ನಮಿಸಿದೆ
ವರವ ಬೇಡೊ ದೇವನೆದುರು
ಬಾಗಿ ನಿನ್ನನ್ನೆ ಕೇಳಿದೆ..

ಕಿರುನಗೆಯ ಬೀರಿ ತುಟಿಯು
ಅಡಿಗೆ ಕೋಣೆ ಸೇರಲು
ಕುಟುಂಬದವರ ರುಚಿಗೆ ಸರಿಯ
ಮಾಡಿ ನೀನು ತಿನಿಸಲು..

ಅಡಿಗೆ ಮನೆ, ಮಲಗುವ ಕೋಣೆ
ದೇವರ ಮನೆ, ಬಚ್ಚಲು ಕೋಣೆ
ಶುಚಿಯು ನಿನಗೆ ಮೀಸಲು
ದಣಿವು ಬರದು ಕರದೊಳು...

ಪ್ರೀತಿಯೊಡಲು ಉಕ್ಕಿ ಹರಿದು
ಗಂಡ ಮನೆ ಮಕ್ಕಳು...
ನಲಿವ ಮನದಿ ಕೆಲಸ ಕಾರ್ಯ
ಸದಾ ಓಡಾಡಿ ನಡೆಸಲು..

ಬಟ್ಟೆ ಒಗೆದು ನೆಲವ ಒರೆಸಿ
ಸ್ನಾನಕೆಂದು ನೀರು ಕುದಿಸಿ..
ಮನೆಯ ಗುಡಿಸಿ ಸ್ವಚ್ಛಗೊಳಿಸಿ
ಮನದಿ ಪ್ರೇಮಸೌಧ ಬೆಳೆಸಿ ..

ನಿನಗೆ ನೀನೆ ಸಾಟಿ ಚೆಲುವೆ
ಪ್ರಪಂಚದಲ್ಲಿ ನೀನೆ ಗೆಲುವೆ
ಸಹನೆಯ ಸಾಕಾರ ಮೂರ್ತಿ
ಜಗಕೆ ಎಲ್ಲ ನೀನೆ ಸ್ಪೂರ್ತಿ...

ಮಾನವತೆಯ ಕುರುಹು ಮಹಿಳೆ
ಕೆಲಸದಲ್ಲೂ ತಾನು ಸಬಲೆ
ಚಿನ್ನ ಮುತ್ತು ರತ್ನದೊಡವೆ
ಸಿಂಗರಿಸೆ, ಉತ್ಸಾಹ ಚಿಲುಮೆ..
@ಪ್ರೇಮ್@
16.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ