ಅಂಬರ ಈ ದಿನ ಹೀಗಿತ್ತು!!!
ಅಂಬರಕ್ಕೆಲ್ಲಿದೆ ಎಣಿಯು ಅಣ್ಣಾ..
ಬರೆದೇ ಬರೆದರು ಕವಿಗಳು ಇದನ್ನಾ...
ಮಹಾಲಕ್ಷ್ಮಿಯವರರುಹಿದರು ಅಜ್ಞಾನದ ಕೇಡನು!
ಯಾರಿಗೂ ತಪ್ಪಿದ್ದಲ್ಲವೆಂದರು ಜಿಟಿಆರ್ ರವರು!!
ಈಶ್ವರಣ್ಣ ಬೆಂಕಿಯಲಿ ಸದ್ದು ಮಾಡಿ ಗುದ್ದಾಡಿದರು!
ನೆಗಳಗುಳಿಯವರು ಅಂಬರಕೆ ತಮ್ಮ ಗಝಲನ್ನೆಸೆದರು!
ಶ್ವೇತಪ್ರಿಯರು ಸಾಕಿಯೊಡನೆ ಕಳೆದರು,
ಅಂಬುಜಾರವರು ಕಲಿಗಾಲಕೆ ಹಾಡಿದರು!
ವಿಶ್ವರೂಪರು ಮನಚೋರಿಯೊಡನಾಡಿದರು!
ಅರುಣಾರವರ ಬಯಕೆಯ ಆರಂಭಿಸಿದರು..
ಪ್ರತಿಮಾರವರು ಪ್ರಿಯಕರನನು ನೆನೆದರು,
ದಾಸಣ್ಣನವರು ಒಲವಲಿ ಮಿಂದರು!!
'ಪ್ರದಿ'ಯವರ ಕುಂಚವು ಶೀರ್ಷಿಕೆರಹಿತ ಕವನವ ಬಿಡಿಸಿತು!
ಸಿದ್ಧು ಸ್ವಾಮಿಯವರಿಂದ ಸತ್ಯ ದರ್ಶನವಾಯಿತು!
ಶಶಿರೇಖಾರವರು ಹುಣ್ಣಿಮೆ ಚಂದ್ರನ ವರ್ಣಿಸಿದರು!
ರವೀಶ ಕವಿಗಳು ಮತ್ತೊಮ್ಮೆ ಕರೆದರು!
ಓಗೊಡುತ ತಕ್ಷಣ ಬಂದ ಚಂದಿರನು ತನ್ನ ನೈದಿಲೆಯೇ ವಿಸ್ಮಯವೆಂದರು!!
ಸಾವಿತ್ರಿಯವರು ಹೊನ್ನ ತೇರಲಿ ಏರಿಸಿಬಿಟ್ಟರು!!
ಶಶಿವಸಂತರು ಕೊನೆಗಾಲವ ನೆನೆದು ಕಣ್ಣೀರಿಟ್ಟರೆ,
ಕುಮುದಾರವರು ಹಗಲಿರುಳಲಿ ಸಂತಸಪಟ್ಟರು!!ಪ್ರಮೀಳಾರವರು ದಿನಕರನ ವರ್ಣಿಸಲು,
ರೂಪಾರವರು ಮುಂಜಾನೆಯ ಸೊಬಗ ಸಂತಸ ಸವಿದರು!!
ಎಂ ಎಸ್ಕೆಯವರು ಋಣ ತೀರಿಸಬಂದರು,
ಆಸೀಫಾರವರು ಯಕ್ಷಪ್ರಶ್ನೆಯಿಂದಲಿ ಬೆಂದರು!
ಶಿಂಧೆಯವರು ಗಝಲನು ಬರೆಯಲು ಹೊರಟರು..
ಗೋಪಿಯವ್ರು ತನ್ನರಗಿಣಿಯನು ಕರೆದರು!!
ಮೊಗೇರಿ ಶೇಖರಣ್ಣ ದೌಡಾಯಿಸಿದರು!
ಇಬ್ಬನಿಯವರು ಅಂಬರ ದಾಟಿ ಮಂಗಳಕೋಡಿದರು!!
ಪುಟ್ಟಣ್ಣನವರು ಎಲ್ಲೇ ಇರಲಿ, 'ಪ್ರೀತಿಸು' ಅಂದರು,
ಮಂಜುಳರವರು ನೆನಪಾಗಿ 'ಅವನನು' ಬರಹೇಳಿದರು!!
ವಿಮರ್ಶಕರೆಲ್ಲ ತಮ್ಮನಿಸಿಕೆ ನೀಡಿ,
ಸರಿ-ತಪ್ಪನ್ನು ತಿದ್ದುತ ನಡೆದರು,
ಚಂದಿರನಂಗಳ ನಗುತಲಿ ತುಂಬಿತು..
ಪ್ರೇಮಾರವರು ಪಿತನನು ನೆನೆಯುತ
ನಮ್ಮೆಲ್ಲರ ತಂದೆ ಚಂದಿರನನು ನಮಿಸೆ..
ಇಂದಿನ ದಿನವು ಹೀಗಿತ್ತು!
ಕೆಲವರು ಬರೆವುದು ಬಾಕಿ ಇತ್ತು!!
@ಪ್ರೇಮ್@
29.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ