ಶರಣು ಸಿದ್ಧಾರೂಡರೆ ನಿಮಗೆ..
ದೇವರ ಧ್ಯಾನದಿ ತಾನು ಮರೆತು
ಬಕುತರ ತಾನು ಮೈಮರೆಸಿರುವ
ಭಕ್ತಿಯ ರಸವನು ಪಸರಿಸುತಿರುವ
ಸಿದ್ಧಾರೂಡರೆ ನಿಮಗೆ ಶರಣು..
ಮನದ ರೋಗಗಳ ಭಕ್ತಿಯಲೆ ಕಳೆದು
ಮನುಜ ಮನಗಳ ಮುಕ್ತಿಗೆ ಎಳೆದು
ಬಾಳಿನ ದಾರಿಯ ತಿಳಿಸುತ ಮೆರೆವ
ಸಿದ್ಧಾರೂಢರೆ ನಿಮಗೆ ಶರಣು...
ವಿವಿಧತೆಯಲು ಏಕತೆ ಮೆರೆದು
ಭಕ್ತರು ಎಲ್ಲರೂ ಒಂದೇ ಎಂದು
ಭಾಗ್ಯದ ಬಾಗಿಲ ತೆರೆಯಿಸಿ ಕೊಡುವ
ಸಿದ್ಧಾರೂಡರೆ ನಿಮಗೆ ಶರಣು...
ಮನೆ ಮನೆ ಎಲ್ಲವ ಬೆಳಗಿಸಿ ತಂದು
ಪ್ರೀತಿಯ ಸೇವೆಯಲೆಂದೂ ಬಂಧು
ದೇವರೆ ನೀವು, ಎಲ್ಲರ ಸಿಂಧು
ಸಿದ್ಧಾರೂಡರೆ ನಿಮಗೆ ಶರಣು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ