ಬುಧವಾರ, ಮಾರ್ಚ್ 27, 2019

885. ಗಝಲ್-77

ಗಝಲ್-77

ನನ್ನಂತೆಯೇ ನೀನೂ ಕೂಡಾ ಒಂಟಿಯಲ್ಲವ ಸೂರ್ಯ!
ದಿನನಿತ್ಯ ಸಮಯಕ್ಕೆ ಸರಿಯಾಗಿ ಮರೆಯಲಾರೆ ನಿತ್ಯ ಕಾಯಕವ ಸೂರ್ಯ!!

ಕಿರಣಗಳ ಚೆಲ್ಲುತಲಿ ಜೀವಿಗಳಿಗೆ ಸಹಕರಿಸುವ ಕಾರ್ಯ!
ಧರೆಯ ನೋಡಲು ಸದಾ ಮುಂಜಾನೆ ಬರುವ ಸೂರ್ಯ!

ನಿನಗಿಲ್ಲ ತನಗೆ ಜತೆಗಾರನಿಲ್ಲ ಎಂಬ ಬಾಳಿನ ಚಿಂತೆಗಳ ಕಂತೆ!
ಮನುಜರಿಗೆ ಯೋಚನೆಯ ಮೂಟೆಯ ಹರಿಯ ಬಿಡುವ ಸೂರ್ಯ!

ಸುಮ್ಮನೆ ಕೂರದೆ ಮಾಡಿ ಪರೋಪಕಾರದ ಕೆಲಸವ!
ಬಂಗಾರವಾದೀತು ಬಾಳು, ಬಾಳ ತೋಟಕೆ ಬೆಳಕ ಕೊಡುವ ಸೂರ್ಯ!

ಆಲೋಚನೆಗಳಿಲ್ಲದಿರೆ ಬರುವುದಂತೆ ಸಂತೆಯಲೂ ನಿದ್ದೆ..
ಸಹಾಯ ಬೇಕೆನಗೆ ಮುಗಿಸಲೆನ್ನ ಕಾರ್ಯವ ಸೂರ್ಯ!

ನಗೆಗಡಲ ತೆರೆಯಂತೆ ಉಕ್ಕಿ ಬರುವೆ ಪೂರ್ವದಿ,
ಬೇಗೆ ಸಹಿಸಲಾರೆನು ಬೇಸಿಗೆಯಲಿ ಬೆಂಕಿಯುಗುಳುವ ಸೂರ್ಯ!!

ಪ್ರಿಯ ಧರೆಗೆ ತಂಪನೀಯದೆ ಬಿರುಬಿಸಿಲ ಸುರಿಸುತಲಿ ನೀನು..
ಪ್ರೇಮದಿ ಕಾದ ಜನಕೆ ಬರಲಿ ತಂಪನೀಯುವ ಸೂರ್ಯ!!
@ಪ್ರೇಮ್@
28.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ