ಕಾವು
ತಮ್ಮನೋ ತಂಗಿಯೋ ಬಂದೇ ಬರುವರು
ನನ್ನೊಡನಾಡಲು ಅಲ್ಲವೇನಮ್ಮಾ?
ಮಗುವದು ಸುಂದರ ಸಣ್ಣದು ಕೂಡಾ
ಆಟವನಾಡುವುದು ಹೇಗಮ್ಮಾ..?
ಕಾಯೋ ಮಗುವೆ ನಿನ್ನಂತೆ ಬೆಳೆವುದು
ಹಾಲನು ಕುಡಿದು ಊಟವ ಮಾಡಿ
ನಿನ್ನಯ ಹಾಗೆ ಆಟವನಾಡುತ
ಬರುವುದು ನಿನ್ನಯ ಬಳಿಗೆಲ್ಲಾ..
ನಮ್ಮಯ ಮಗುವಿಗೆ ಹೆಸರೇನಮ್ಮಾ
ನಾವೇ ಹೆಸರನು ಇಡಬೇಕಮ್ಮಾ..
ಬಟ್ಟೆಯ ಹೊಲಿಸಿ, ಟೋಪಿಯ ಕಟ್ಟಿಸಿ
ತೊಟ್ಟಿಲ ತಂದು ಇಡಬೇಕಮ್ಮಾ...
ಮೊದಲೇ ಬೇಡ ನಂತರ ತರುವ
ನಿನ್ನಯ ತೊಟ್ಟಿಲೆ ಇದೆಯಲ್ಲ?
ಬಟ್ಟೆ, ಟೋಪಿ ಎಲ್ಲವೂ ಇಹುದು
ನೀನೇ ಹಂಚಿ ಕೊಡಬಹುದಲ್ಲ!?
ಆಗಲಿ ಅಮ್ಮ, ಕೊಡುವೆನು ಮಗುವಿಗೆ
ಆಟದ ಸಾಮಾನು ಹಂಚುತ ಆಡುವೆ
ಪೆಪ್ಪರ್ ಮಿಂಟದು ಕಚ್ಚಿ ಕೊಡುವೆ
ಸೈಕಲ್ ನಲ್ಲಿ ಹಿಂದೆ ಕೂರಿಸುವೆ
ಡಬಲ್ ರೈಡಲಿ ನಾನೇ ಒಯ್ಯುವೆ..
ಆಟದಿ ಪಾಠದಿ ಜತೆಗಿರಬೇಕು
ಒಳ್ಳೆಯ ಗುಣವನು ಕಲಿಯಲುಬೇಕು
ಎಲ್ಲರೂ ನೋಡಿ ಹೊಗಳಲು ಬೇಕು.
ಅಮ್ಮ ಅಪ್ಪನಿಗೆ ಸಂತಸ ತರಬೇಕು..
@ಪ್ರೇಮ್@
06.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ