ನನ್ನೊಲವ ಹಣತೆಗೆ
ಮಧುಕರನೆ ಬೆಳಗ ಅಮವಾಸ್ಯೆಗೆ ದೂಡದಿರು
ರವಿವರ್ಮನೆ ಕಲಾಕುಂಚದಿ
ಬಣ್ಣಗಳ ಅಳಿಸದಿರು..
ಮರೆವೆಂಬ ಸೆರಗಿನ ಒಳಗೆ
ಮುಖವ ತೆರೆಮರೆಯಲಿ ಹುದುಗಿಸದಿರು
ಪಾಂಡವರ ವನವಾಸದ ತೆರದಿ
ವೇಷ ಮರೆಸಿ ಜಾರದಿರು..
ಧವಸ ಬೆಳೆವ ಭೂಮಿಯಂತೆ
ಇತರರಿಗೂ ಪ್ರೀತಿಯುಣಿಸುತಿರು..
ಭೋರ್ಗರೆಯುವ ಮಳೆಹನಿಯ
ಈ ಕಡೆಗೇ ಸುರಿಯುತಿರು..
ಭಾವ ಬಳ್ಳಿ ಈಜು ರೆಕ್ಕೆ
ಪಡೆದು ದೂರ ಸಾಗುತಿರು..
ಗಾಳಿಪಟದ ರೀತಿಯಲ್ಲಿ
ಮೇಲೆ ಮೇಲೆ ಓಡುತಿರು..
ಎಲ್ಲೆ ಹೋಗು ಎಲ್ಲೇ ಇರು
ನನ್ನ ಮಾತ್ರ ತೊರೆಯದಿರು
ಒಲವ ಹಣತೆ ಬೆಳಗುತಿರು
ನನ್ನ ಜೊತೆಯಲೇ ನೀನಿರು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ