ತಡವೇಕೆ?
ಸೂರ್ಯಗೆ ಬೆಳ್ಳಂಬೆಳಗ್ಗೆ ಹುಟ್ಟಲು
ಭೂಮಿಯ ಅಪ್ಪಣೆ ಬೇಕೇ?
ಧರೆಗೆ ತನ್ನಯ ಸುತ್ತಲು ಸುತ್ತಲು
ಗ್ರಹಗಳ ಅನುಮತಿ ಬೇಕೇ?
ನಾಯಿಗೆ ಮನೆಯ ಕಾವಲು ಕಾಯಲು
ಒಡೆಯನು ಹೇಳ ಬೇಕೇ?
ವದನಕೆ ಅಂದದ ನಗುವನು ಚೆಲ್ಲಲು
ತುಟಿಗಳು ಬಿರಿಯ ಬೇಕೇ?
ಮಲ್ಲಿಗೆ ಮೊಗ್ಗದು ಬಿರಿಯುತ ಅರಳಲು
ಎಲೆ ಬಳ್ಳಿಯ ಕೇಳ ಬೇಕೇ?
ಸಾಗರದಲೆಗಳು ಉಕ್ಕುತ ಬರಲು
ಬಂಡೆಯು ಕುಳಿತಿರಬೇಕೆ??
ಒಳ್ಳೆಯ ಕೆಲಸವ ಮಾಡುತಲಿರಲು
ಯಾರದು ಅನುಮತಿ ಬೇಕು?
ತನ್ನಯ ಸಮಯದಿ ತಾನೇ ಮಾಡುತ
ಹಲವರ ಪ್ರೀತಿ ಗಳಿಸಲು ಬೇಕು..
ಬಾಳಲಿ ಎತ್ತರಕೇರ ಬೇಕು..
@ಪ್ರೇಮ್@
15.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ