ಅಮ್ಮ
ನೀ ಹೂವಾದರೆ ನಿನ್ನ ಹುಡುಕಿ ಬರುವ ದುಂಬಿಯು ನಾನು ಅಮ್ಮಾ..
ನೀ ಮರವಾದರೆ ನಿನ್ನ ತಬ್ಬಿ ಬೆಳೆವ ಬಳ್ಳಿಯು ನಾನು ಅಮ್ಮಾ..
ನೀ ಕಣ್ಣೀರಾದರೆ ಅದ ಒರೆಸುವ ಕೈಗಳು ನಾನಮ್ಮಾ..
ನೀ ದೀಪವಾದರೆ ಅದರಲಿ ಉರಿಯುವ ಬೆಂಕಿಯು ನಾನಮ್ಮಾ..
ನಿನ್ನಯ ತುಂಬಿದ ಪ್ರೀತಿಗೆ ತಲೆಬಾಗುವ ಭಕ್ತನು ನಾನಮ್ಮಾ..
ಮನಸಿನ ಮಾತಿಗೆ ತಲೆದೂಗುವ ಹೂವಿನ ಮಕರಂದ ನಾನಮ್ಮಾ..
ಹಾಲನು ಕುಡಿಯುತ ಹೊಟ್ಟೆಗೆ ಒದ್ದ ನಿನ್ನದೇ ಕುಡಿಯಮ್ಮಾ..
ಮೊದಲನೆ ಗುರುವೆ, ಹತ್ತು ದೇವರಿಗೆ ಸಮಾನ ನೀನಮ್ಮಾ..
@ಪ್ರೇಮ್@
21.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ