ಶನಿವಾರ, ಮಾರ್ಚ್ 16, 2019

860. ಕವನ

*ಕವನ*
ನನ್ನ ಮನದ ಭಾವಗಳೇ
ಬತ್ತಿ ಹೋಗ ಬೇಡಿರಿ..
ನನ್ನ ಮೆದುಳ ಯೋಚನೆಗಳೆ
ಚೆಲ್ಲಿ ಹೋಗ ಬೇಡಿರಿ...

ನನ್ನ ಹೃದಯ ಪದಗಳೇ
ಜಾರಿ ಹೋಗ ಬೇಡಿರಿ..
ನನ್ನ ಒಲವ ಗೀತೆಗಳೇ
ಬಾಡಿ ಹೋಗ ಬೇಡಿರಿ...

ನನ್ನ ಜೀವ ಕವನಗಳೇ
ನಲುಗಿ ಹೋಗ ಬೇಡಿರಿ..
ನನ್ನ ಕನಸ ಚಿಗುರುಗಳೇ
ತುಂಡು ತುಂಡಾಗ ಬೇಡಿರಿ...

ನನ್ನ ಒಲವ ತಂತುಗಳೇ
ಮುದ್ದೆಯಾಗ ಬೇಡಿರಿ..
ನನ್ನ ತುಟಿಯ ಅಕ್ಷರಗಳೇ
ಕರಗಿ ಹೋಗ ಬೇಡಿರಿ..

ನನ್ನ ಕಣ್ಣ ಕಾಂತಿ ಸಾಲುಗಳೇ
ಕತ್ತಲ ಹುಡುಕ ಬೇಡಿರಿ..
ನನ್ನ ಕೈಯ ಲೇಖನಿಯೇ
ಸೋಮಾರಿಯಾಗ ಬೇಡಿರಿ..
@ಪ್ರೇಮ್@
16.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ