ಶುಕ್ರವಾರ, ಮಾರ್ಚ್ 15, 2019

856. ನೆನಪಿನಲೆಯೊಳಗೆ

ಪ್ರೀತಿಯ ಕಡಲಲ್ಲಿ...

ಹೃದಯವೇ ನಿನ್ನ ನೆನಪಿನಲೆಯೊಳಗೆ
ಎಂದೂ ಕೊನೆಯಾಗದ ಪ್ರೀತಿ
ಉಲ್ಕೆಯಂತೆ ಸದಾ ಚಿಮ್ಮಿಬರುವುದು...//

ನಿನ್ನ ತಂಪಿನ ಕರವು
ಮತ್ತೆ ಮತ್ತೆ ನನ್ನ ಸೋಕಲು
ಸ್ಪರ್ಶ ಸುಖದಾನಂದ ತುಂಬಿ ತರುವುದು..
ದೇಹದೊಳಗಿನ ಪ್ರತಿ ಕಣವು ಎದ್ದು
ನಾಟ್ಯಗಾರನ ತೆರದಿ ರುಣಿಯುತಿರುವುದು//

ಮಳೆಯ ಮೋಡದ ಓಟ ನಿನ್ನ ಸೂಚಿಸಲು
ಮನ ಜಾರಿ ನಿನ್ನೆಡೆಗೆ ಅಂಟಿಕೊಳಲು....
ಕಣ್ಣ ಬಾಣಗಳೆನ್ನ  ನಾಟಿ ನಾಚಿಸಲು
ಹೃದಯದೊಳಗದುವೇ ತೂರಿಕೊಳಲು...//

ನಿನ್ನ ತುಂಟ ಕಿರುನಗೆಯು ಚೆನ್ನ
ಬೆಳ್ಳಿಚುಕ್ಕಿಯಂತೆ ಅದರ ಮೈ ಬಣ್ಣ..
ನಕ್ಷತ್ರ ಮಾಲೆಯನು ಪೋಣಿಸಿ ತಂದು
ಸಾಲು ಮುತ್ತಲಿ ಕಟ್ಟಿ ಪುಳಕ  ಸನಿಹ..//

ರೋಮಾಂಚನಈ ಬದುಕು
ಪ್ರೇಮ ಸಾಗರದಿ ತೇಲಿ...
ರೋಚಕವು ಕ್ಷಣ ಕ್ಷಣವೂ
ನಿನ್ನೈಕ್ಯತೆಯ ಸಮಯದಲಿ..//

ನಿನ್ನ ಮುನಿಸದು ವಿರಳ
ಮೂಡುವುದು ಕಾಮನ ಬಿಲ್ಲಿನಂತೆ
ಎದೆ ಬಡಿತ ಹೆಚ್ಚುತ ಸಾಗಿದೆ
ಬಿಸಿಯುಸಿರು ಕೆನ್ನೆ ಬಳಿ ಬಂದು....//

@ಪ್ರೇಮ್@
16.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ