ಭಾನುವಾರ, ಮಾರ್ಚ್ 31, 2019

895. ಭಾವಸುಮ

ಭಾವಸುಮ

ಭಾವಗಂಗೆಯಲ್ಲಿ ಮಿಂದು
ನಾದಕಡಲಲಿ ನಿಂದು
ಮಾತಿನಲ್ಲು ಮೌನದಲ್ಲು
ನೀನೇ ಕಾಣುವೆ ಗೆಳತಿ..ನೀನೆ ಕಾಣುವೆ..

ತುಟಿಗಳೆರಡು ಸ್ವಲ್ಪ ತೆರೆದು
ನಗೆಯ ಬೀರಲು
ನಸುನಾಚಿಕೆ ತುಸು ಬೇಸರ
ಕಣ್ತುಂಬಿ ಹೃದಯ ತುಂಬಿ..ನನ್ನ ಹೃದಯ ತುಂಬಿ..

ನವಿರು ಸ್ಪರ್ಶ ಹಿತವಾಗಿ
ನವಿಲಿನಂತೆ ಮನವು ತೂಗಿ
ಬಾಳ ಬುತ್ತಿಯಲಿ ಸಾಗಿ
ಕಾಲ ಗರ್ಭದೊಳಗೆ ಜಾರುವ..ನಾವು..ಕಾಲಗರ್ಭದೊಳಗೆ..

ನವವಸಂತ ಬದುಕಿನಲ್ಲಿ
ನವ ಪಲ್ಲವಿ ಜೀವನ ರಾಗದಲಿ
ಅನುರಣಿತವು ಕಿವಿಯ ಒಳಗೆ
ನಿನ್ನ ಮಧುರ ನುಡಿಯು..ನಿನ್ನ ಮಧುರ..
@ಪ್ರೇಮ್@
01.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ