ಮಂಗಳವಾರ, ಮಾರ್ಚ್ 19, 2019

867.ಗಝಲ್-69

ಗಝಲ್-70

ಅಳಿವಿನಂಚಿಗೆ ಸರಿಯುತಿಹ ನಾ ಲೇಖನಿಯು ಗೆಳೆಯ.
ಒಂದು ಕಾಲದಿ ಜ್ಞಾನ ಬಿತ್ತರಿಸಿಹ ನಾ ಲೇಖನಿಯು ಗೆಳೆಯ.

ಕಂಪ್ಯೂಟರ್, ಮೊಬೈಲ್ ಕೀಲಿಮಣೆ ಬಂದಿಹವು.
ಬೇಡವೆಂದು ಬದಿಗೆ ಬಿಸುಟಿಹ ನಾ ಲೇಖನಿಯು ಗೆಳೆಯ.

ಕೈ ಬೆರಳಿಗೆ ಸೂಕ್ಷ್ಮ ವ್ಯಾಯಾಮವ ನೀಡುತಲಿದ್ದೆ.
ಶಾಯಿ ಕುಡಿದು ಅಕ್ಷರ ಮೂಡಿಸುತಲಿಹ ನಾ ಲೇಖನಿಯು ಗೆಳೆಯ.

ಕಡ್ಡಿ ಪೆನ್ನಿನ ನಂತರ ಜೆಲ್ ಪೆನ್ನು ಬಂತು.
ಈಗ ಮಾಯವಾಗುತಲಿಹ ನಾ ಲೇಖನಿಯು ಗೆಳೆಯ.

ಮುಂದೊಂದು ದಿನ ನೀ ನನ್ನ ನೋಡಲಾರೆ.
ವಿದ್ಯಾರ್ಥಿಗಳ ಕೈಲಿ ಕುಣಿಯುತಿಹ ನಾ ಲೇಖನಿಯು ಗೆಳೆಯ.

ನಿನ್ನ ಹಸ್ತಾಕ್ಷರವ ಮೂಡಿಸಲು ನಾನು ಬೇಕಿತ್ತು ಆಗ.
ವಯಸಾಗಿ ಮುದಿಯಾಗಿಹ ನಾ ಲೇಖನಿಯು ಗೆಳೆಯ.

ಪ್ರೀತಿಯಿಂದ ಹೃದಯದ ಮಾತು ಬರೆಯುತ್ತಿದ್ದರು ಕವಿಗಳು.
ಪ್ರೇಮವಿಲ್ಲದೆ ಸೊರಗುತಿಹ ನಾ ಲೇಖನಿಯು ಗೆಳೆಯ.
@ಪ್ರೇಮ್@
19.03.2019

***ಪ್ರೇಂ ಸಹೋದರಿ**

ಲೇಖನಿಯ ವಿಷಯವನ್ನು
ಬಳಸಿಕೊಂಡು ಲೇಖನಿಯ
ವೇದನೆಯನ್ನು ಭಿನ್ನವಾದ
ರೀತಿಯಲ್ಲಿ ಮನಮುಟ್ಟುವ ರೀತಿಯಲ್ಲಿ ಬರೆದಿದ್ದೀರಿ.
ನಿಜವಾಗಿಯೂ ಈ ಕಂಪ್ಯೂಟರ್ ಮೊಬೈಲ್ ಲ್ಯಾಪ್ ಟಾಪ್ ಗಳ ಯುಗದಲ್ಲಿ
ಲೇಖನಿಯ ಕಡೆಗೆ ಗಮನ
ಕಡಿಮೆಯಾಗುತ್ತಿದೆ.
ನಮ್ಮ ಶಾಲಾದಿನಗಳಲ್ಲಿ ನಾವು
ಕಡ್ಡಿಯಿಂದಲೇ ಎಷ್ಟೋ
ಹೋಮ್ ವರ್ಕ್ ಗಳನ್ನು ಮಾಡುತ್ತಿದ್ದೆವು. ಆಗ ಹೊಸ
ಲೇಖನಿ ಸಿಕ್ಕಿದರೆ ಖುಷಿ ಪಡುತ್ತಿದ್ದೆವು.ಆದರೆ ಕಾಲ ಎಷ್ಟೇ ಬದಲಾದರೂ ಲೇಖನಿಯ ಅವಶ್ಯಕತೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ಅಲ್ಲಗಳೆಯಲೂ ಆಗದು.
ನಿಯಮಾನುಸಾರವಾಗಿ ಗಜಲ್
ಬರೆದ ತಮಗೆ ಹೃತ್ಪೂರ್ವಕ ಅಭಿನಂದನೆಗಳು.

***ಯು ಸಿರಾಜ್ ಅಹಮದ್ ಸೊರಬ***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ