ಇರಲಿ ಹೀಗೇ...
ನನ್ನ ನಿನ್ನ ನಡುವೆ ಇಲ್ಲವು
ಯಾವ ರೀತಿಯ ಕಂದರ..
ತಿಳಿದುಕೊಂಡೇ ನಾವು ಇರುವೆವು
ಜೊತೆ ಜೊತೆಯಲಿ ನಿರಂತರ..
ಭಾವ ಬಳ್ಳಿಯ ಬೇರುಗಳಲೂ
ಮನದ ಮಾತದು ಸುಮಧುರ..
ಬದುಕು ಬಹಳ ಬೇಡ ತಳಮಳ
ಇರದಿರಲಿ ನಮಗೆ ಅವಸರ..
ಸ್ಪರ್ಶ ಮುತ್ತದು ನಮ್ಮ ಒಡವೆಯು
ಬಾಳ ಹಸಿರದು ಅಮರವೂ
ಒಡಲ ಒಳಗಿನ ಕಿಚ್ಚು ದಹಿಸಲು
ಪ್ರೇಮವೊಂದೇ ಸ್ಪೂರ್ತಿಯೂ..
ನಿನ್ನ ಕರೆಗೆ ನನ್ನ ನೋಟವು
ಪುಳಕ ನಖ -ಶಿಖಾಂತದಿ
ಬೆವರ ಹನಿಗಳು ಮೂಡುವಾಗಿನ
ಬೆಚ್ಚನೆಯ ಹಿತವು ಮನದಾಳದಿ ...
ಅರ್ಥಗರ್ಭಿತ ಬದುಕ ತೀರದಿ
ವೇಗ ಓಡುವ ನಾವೆಯೂ
ಮಕ್ಕಳ ಸುಖ ಪಡೆದು ನಡೆಯುತ
ಮೌನವಿಲ್ಲದ ಗಳಿಗೆಯೂ...
@ಪ್ರೇಮ್@
12.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ