ನೆನಪುಗಳು
ನಾ ನೋಡ ಹೋಗಿದ್ದೆನೊಂದು
ಐತಿಹಾಸಿಕ ಯಕ್ಷಗಾನ ಪ್ರಸಂಗ!
ರಾತ್ರಿಯಿಡೀ ನಡೆಯುತಲಿತ್ತು ಕಾಳಗ!
ನಾನಿನ್ನೂ ಚಿಕ್ಕವಳಿದ್ದೆ, ಅರ್ಥವಾಗುತ್ತಿರಲಿಲ್ಲ ಆಗ!!
ಮಹಿಷಾಸುರ ದಗ್ಗನೆ ಬಂದ!
ಮೋಹಿನಿ ವೈಯ್ಯಾರದಿ ನರ್ತಿಸಿದಳು!
ಶಿವ ತಾಂಡವ ನೃತ್ಯ ನಡೆಯಿತು..
ಡಣಡಣ ಘಣಘಣ ಬಡಿತಗಳು..
ಆಹಾ! ಏನಂದದ ಕಿರೀಟಗಳು!
ಬಣ್ಣ ಬಣ್ಣದ ಉಡುಗೆಗಳು..
ಯಕ್ಷ, ಕಿನ್ನರ, ಕಿಂಪುರುಷ ವೇಷಗಳು!
ಯಕ್ಷಿಣಿ, ಮಾಟಗಾತಿ, ರಾಜ, ರಾಣಿಯರು!!
ಅಂದದ ಸರ, ಬಳೆ, ಸೀರೆ, ಆಭರಣ
ದೊಡ್ಡ ಮೀಸೆ, ಕೈ ತಿರುಗುವ ಶೈಲಿ
ನಡು ಕುಣಿಸುತ ಕುಣಿವ ಪರಿ!
ತಾಳಕ್ಕೆ ತಕ್ಕನಾಗಿ ಭಾಗವತರ ಹಾಡು!
ತಾಳ, ಚಂಡೆ, ಮದ್ದಳೆಗಳ ಕಲರವ!
ರಾಜನ ಒಡ್ಡೋಲಗಕೆ ರಾಣಿಯ ಆಗಮನ!
ರಾಜ ರಾಣಿಯ ಸಂಭಾಷಣೆ, ಅಭಿನಯ!
ನಾಟ್ಯ ವೈಭವದಲಿ ಮೈಮರೆತೆ ಅನುಕ್ಷಣ..
ಸ್ವಲ್ಪ ಹೊತ್ತಿಗಾಗಲೇ ಬೆಳಕಾಗಿತ್ತು!!
"ಮುಗಿಯಿತು,ಮನೆಗೆ ಹೋಗೋಣ"ಎಂದರು ಅಜ್ಜಿ!
ರಾತ್ರಿಯಿಡೀ ಕಳೆದದ್ದೆ ಗೊತ್ತಾಗಲಿಲ್ಲ!!
@ಪ್ರೇಮ್@
26.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ