ನಾನು-ನಾನು
ಮಲಗಿಯೇ ಇದ್ದೆ , ನಿದ್ದೆಯೂ ಇತ್ತು
ನನ್ನಯ ಆತ್ಮವು ನನ್ನಯ ಬಳಿ ಬಂತು!!
ಹರಟೆಗೆ ಬಿತ್ತು,ಪುಳಕಿತಗೊಂಡೆ!
ತನ್ನಯ ಜಾತಕ ಬಿಚ್ಚಿಟ್ಟಿತ್ತು!
ಹೇಳು ನಾ ಯಾರಿಗೆ ಸುಳ್ಳನು ಹೇಳಿದೆ
ನೇರವಾಗೆನ್ನ ಕೆದಕಿ ಕೇಳುತಲಿತ್ತು!
ಹೆತ್ತವರಿಗೆ, ಹಿರಿಯರಿಗೆ, ಕಿರಿಯರಿಗೂ!
ಹೃದಯ ನೇರವಾಗಿ ಉತ್ತರ ಬೀಸಿತ್ತು!
ಅದು ಸರಿ, ಯಾರಿಗೆ ಮೋಸ ಮಾಡಿರುವೆ?
ನಿನಗೆ, ನನಗೆ, ನನ್ನ ಸಂತೋಷಕೆ!
ಬೇಗನೆ ಬಂತು ಉತ್ತರ ಹೊರಗೆ!!
ಯಾಕೆಂದು ಬಂದಿದೆ ಇಬ್ಬರ ಅರಿವಿಗೆ!!
ಅದು ಬಿಡು, ಯಾರ ಮನಸು ನೋಯಿಸಿರುವೆ?
ಮನೆಯಲಿ, ಕಛೇರಿಯಲಿ, ಹೊರಗಿನ ಜನರಲಿ!
ಬಂತದು ಉತ್ತರ ಹಾರುತಲಿ!!
ಅಯ್ಯೋ! ಎನ್ನುತ ಆತ್ಮ ಚೀರಿತ್ತು!
ಯಾಕೋ ಏನೋ ಏನಾಯ್ತೆನ್ನಲು,
ಮುಂದಿನ ಜನುಮಕೂ ಮುಕ್ತಿಯದಿಲ್ಲ!
ಬೇಡದ ಮಾಡಿ ಕಟ್ಟಿಹೆಯಲ್ಲ!
ಎಂದಾತ್ಮವು ದುಃಖಿಸಿ ಹೋಯಿತಲ್ಲ!!!
@ಪ್ರೇಮ್@
07.032019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ