ನಮ್ಮ ಶಿವಪ್ಪ
ಭುವಿಯ ಕಾವ ದೇವ ಬಂದ ನಮ್ಮ ಶಿವಪ್ಪ
ದುಷ್ಟರ ತಲೆಯ ಚೆಂಡಾಡಿದ ನಮ್ಮ ದೇವಪ್ಪ...
ಗಣೇಶಗೆಂದು ಮೊದಲ ಪೂಜೆ ನೀಡಿದೆ ನೀನಪ್ಪ
ಹರಿಯ ವರಿಸಿ ಬಸ್ಮಾಸುರನ ಸಂಹರಿಸಿದೆಯಪ್ಪ...
ಸುಬ್ರಹ್ಮಣ್ಯ ಪಿತ, ಪಾರ್ವತಿ ಪತಿ ನೀನೆ ಶಿವಪ್ಪ
ದೇವರ ದೇವನೆ ಗಂಗೆಯ ಮುಡಿಲಿರಿಸಿಕೊಂಡೆಯಪ್ಪ...
ಜಟಾಧರನೆ ಬಿಲ್ವಪ್ರಿಯನೆ ವಂದಿಪೆ ನಿನಗಪ್ಪ
ಪರಮೇಶನೆ ಮಂಜುನಾಥನೆ ಕಾವನು ನೀನಪ್ಪ...
ವಿಷಕಂಠನೆ ಸದಾಶಿವನೆ ವರವ ನೀಡಪ್ಪ
ಗಂಗಾಧರನೆ ಹರಿಹರೇಶನೆ ನಮ್ಮ ಕಾಯಪ್ಪ...
ಬ್ರಹ್ಮ ವಿಷ್ಣುವಿನೊಡಗೂಡುತ ವಿಶ್ವ ಕಾಯೋ ಗುರುವೆ
ಭಕುತರಿಗೊಲಿದು ವರವ ನೀಡುವ ರುದ್ರಾಕ್ಷಿ ಪ್ರಿಯನೇ..
@ಪ್ರೇಮ್@
4.3.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ