ಗುರುವಾರ, ಮಾರ್ಚ್ 14, 2019

852. ಗೋರಿಯೊಳಗಿನ ವ್ಯಥೆ

ಗೋರಿಯೊಳಗಿನ ವ್ಯಥೆ

ನಾ ಬದುಕಿದ್ದಾಗ ನನ್ನ ಸೊಸೆ
ಕೇಳಲಿಲ್ಲ ನನ್ನ ಮಾತು!!
ಛೆ! ಒಂದು ಮಗುವೂ ನಾನೆಣಿಸಿದಂತೆ ವೈದ್ಯನಾಗಲಿಲ್ಲ!!
ಮುಖ್ಯಮಂತ್ರಿಯಾಗುವ ಕನಸು ನನಸಾಗಲೇ ಇಲ್ಲ!!
ನನ್ನ ಹಿಂಬಾಲಕರು ಕೆಲವರು ಮೋಸ ಮಾಡಿದರು!!!

ವಿತ್ತ ಖಾತೆ ಕೇಳಿದೆ, ಕೊಡಲಿಲ್ಲ!
ಪ್ರಸಾರ ಖಾತೆಗೇ ತೃಪ್ತಿಪಟ್ಟೆ!!
ಮಗಳು ವಚನ ಕೇಳದೆಯೇ
ವಿರೋಧ ಪಕ್ಷದವನ ಮಗನೊಂದಿಗೆ ಸೇರಿಕೊಂಡಳು!
ಮಗ ಚಿತ್ರರಂಗದತ್ತ ಬೇಡವೆಂದರೂ ಮುಖಮಾಡಿದ!!

ಮನೆ ಮಠ ಮಾಡಿದೆ,ಕೆಲಸದವರಿಗೆ ಮೀಸಲಾಗಿದೆ..
ನಾ ಸತ್ತು ತಿಂಗಳಿಗೇ ಮಡದಿ ಮಂತ್ರಿಯಾಗಿ ನನ್ನ ಮರೆತಿರುವಳು!!
ನಾ ಸಾಧಿಸಲಾಗಲಿಲ್ಲ,
ಕನಸೆಲ್ಲಾ ನನಸಾಗಲಿಲ್ಲ!!!

ಯಾಕಾದರೂ ಹೃದಯ ಸ್ತಬ್ಧವಾಯಿತೇನೋ?
ವೈದ್ಯರು ನೋಡಿ ಪರೀಕ್ಷಿಸಿ, ಕಣ್ಣು, ಮೂತ್ರಕೋಶ ತೆಗೆದರು!
ಮತ್ತೊಮ್ಮೆ ಹೊಲಿದು ಕಟ್ಟಿಬಿಟ್ಟರು!!
ಕೋಟ್ಯಾಧೀಶನಿಗೆ ಬಿಳಿ ಬಟ್ಟೆ ಹಾಸಿ ಹೆಣವೆಂದರು!!

ನನ್ನ ಹಣವದು ಮಠಗಳೊಳಗೆ ಸಿಕ್ಕಿ ಹಾಕಿಕೊಂಡಿತು!
ಹೋಟೆಲ್, ಮಾಲ್,ಫಾರ್ಮ್ ಗಳು ಬಡವಾದವು!
ಸಾವಿರಾರು ಕೆಲಸಗಾರರು ಅನಾಥರಾದರು!!!

ಚಿತ್ರನಟಿಗೆ ಇನ್ನಾರು ದಿಕ್ಕೋ ಪಾಪ!
ಬರುತಲಿದೆ ದೇವರ ಮೇಲೆ ಕೋಪ!!
ನನ್ನ ಮತ್ತೆ ಮಗುವಾಗಿಸಿ ಹುಟ್ಟಿಸೋ ದೇವ!
ರಾಜನೋ ರಾಜಕಾರಿಣಿಯೋ ಆಗಿ!!!
@ಪ್ರೇಮ್@
14.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ