ಶುಕ್ರವಾರ, ಅಕ್ಟೋಬರ್ 5, 2018

507. ಕವನದೊಳಗೆ...

ಕವನದೊಳಗೇನು..

ಕವನದೊಳಗೇನು ಮಾಡುವುದು
ಬರೆಯುವುದೆಂತು ಓದುವುದೆಂತು
ಕಡಿದು ಉರುಳಿಸುವ ಬೋರನೂ
ಬೆಳೆಸಿ ತೋರಿಸಿ ಎಳೆ ಹಸಿರನು..

ಕವನದೊಳಗೆ ಹೆಣ್ಣು ಅಬಲೆ
ನಿಜ ಜೀವನದಿ ಹೆಣ್ಣಿಗೇ ಬಲೆ..
ಬೆಲೆ ಕೊಟ್ಟು ನೋಡಿರಿ ಅವಳನು
ಗೌರವಿಸಿ ತೋರಿಸಿ ಅವಳ ಕಾರ್ಯವ..

ಕವನದೊಳಗೆ ನೀರು ಮಾತೆ
ನದಿಯು ಎಮಗೆ ಜನ್ಮದಾತೆ
ಕೆಡಿಸಬೇಡಿರಿ ಜಲವನು
ಶುದ್ಧವಾಗಿಡಿ ನದಿ-ಕೆರೆಯನು..

ಕವನದೊಳಗೆ ಮಾತೆ ದೇವತೆ
ಅಮ್ಮ ನೀನೇ ನನ್ನ ಜೀವನ
ನಿಜದಿ ತಾಯಿಯ ಕೇಳುವವರಿಲ್ಲ
ತಾಯಿ ದುಡಿದೇ ಉಣುವಳಲ್ಲ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ