ಗಝಲ್
ಸರ್ವರಿಗೂ ಕಂಪ ಸೂಸಲಿ ನೀ ಮುಡಿದೀ ಮಲ್ಲಿಗೆ
ಸಕಲರಿಗೆ ತಂಪ ನೀಡಲಿ ನೀ ಮುಡಿದೀ ಮಲ್ಲಿಗೆ..
ಕರುನಾಡ ಕತ್ತಲಿನ ಅಂಧಕಾರ ಸರಿಸಲಿ
ಜಾತಿ ಮತಗಳ ಒದ್ದೋಡಿಸಲಿ ಪರಿಮಳದೀ ಮಲ್ಲಿಗೆ..
ಹಗಲಿರುಳು ತಣ್ಣನೆಯ ಚಳಿಯಲ್ಲಿ ನಡುಗುವರು
ದೇಶ ಕಾಯುವ ವೀರರವರ ಶೂರತೆಯ ಸಂಕೇತವದೀ ಮಲ್ಲಿಗೆ..
ದೇವಿಯರ ಪ್ರಿಯ ಗಾನವಿದೆ ಇದರೊಳು
ಮಾನಸಿಕ ಸಂತಸವೀಯುವುದೀ ಮಲ್ಲಿಗೆ..
ಬಿರುಬಿಸಿಲ ಬೆಂಗಾಡಿನಲೂ ಮಳೆ ತರಲಿ ಮೋಡಗಳು
ಅವುಗಳಿಗೆ ಶಕ್ತಿಯೀವ ಗುಣ ತರುವುದೀ ಮಲ್ಲಿಗೆ..
ಹೆಣ್ಣು ಮಗುವಿನ ಭ್ರೂಣ ಹತ್ಯೆಯದು ನಿಲ್ಲಲಿ..
ಹುಡುಗಿಯರ ಶಕ್ತಿ ಮೆರೆವುದೀ ಮಲ್ಲಿಗೆ...
ಪ್ರೀತಿಯಿಂದಲಿ ಪತಿಯು ತಂದು ಮುಡಿಸುವ ಮಡದಿಗೆ
ಅಮರ ಪ್ರೇಮದ ಕಾಣಿಕೆಯದೀ ಮಲ್ಲಿಗೆ...
@ಪ್ರೇಮ್@
ಚೆನ್ನಾಗಿದೆ ಸಾರ್
ಪ್ರತ್ಯುತ್ತರಅಳಿಸಿ