ಗಝಲ್-44
ಕಾರಿರುಳ ಕಾರ್ಗತ್ತಲೆಯ ಕಮರಿದ ಬದುಕಿಗೆ ಬೆಳಕ ತಂದವನು ನನ್ನಿನಿಯ....
ಕಾರ್ಮೋಡ ಕಟ್ಟಿದ ಬಾಳಲಿ ಬಂದು ಮಳೆ ಸುರಿಸಿದವನು ನನ್ನಿನಿಯ...
ಕವಿತೆಯ ಗೂಡನು ಎದೆಯಲಿ ಕಟ್ಟಿದವನು,
ಮೊಟ್ಟೆಗಳನಿಟ್ಟು ಕಾವು ಕೊಟ್ಟವನು ನನ್ನಿನಿಯ...
ಕಾಡಿನ ಹಸಿರನು ಬದುಕಲಿ ನಿರ್ಮಿಸಿದವನು,
ತೋಟ ನಿರ್ಮಿಸಿ, ಆಟವಾಡಿದವನು ನನ್ನಿನಿಯ...
ವಸಂತ ಋತುವನು ಹುಡುಕುತ ತಂದನು..
ಗ್ರೀಷ್ಮದ ಕಳೆಯನು ಮನಕಿರಿಸಿದವನು ನನ್ನಿನಿಯ..
ಚಂದಿರನನ್ನು ಭೂಮಿಗೆ ಇಳಿಸಿ ನನ್ನೊಡನಾಡಿಸಿದವನು..
ಸೂರ್ಯನ ಬಿಸಿಯ ತಟ್ಟಲು ಬಿಡದವನು ನನ್ನಿನಿಯ..
ಒಂಟಿಯ ಬಾಳಿಗೆ ಜೋಡಿಯಾಗರಳಿದವನು..
ತಂಟೆಯ ಮಾಡುತ ಮನದಲೆ ನಿಂದವನು ನನ್ನಿನಿಯ...
ಬಾಳಿನ ಕ್ಷಣ ಕ್ಷಣದಲು ಪ್ರೀತಿಯ ಸುರಿದವನು...
ಪ್ರೇಮದ ಅಮೃತವ ದಿನದಿನ ಉಣಿಸುವವನು ನನ್ನಿನಿಯ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ