ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-16
ತಾಳ್ಮೆ ಇರಲಿ ಬದುಕಿನಲಿ...
ನವರಾತ್ರಿ ಬಂತು, ಹಬ್ಬದ, ಪೂಜೆಯ ಸಡಗರ, ದೇವಿಯ ಕೃಪಾಶೀರ್ವಾದಗೆಳನ್ನು ಎಲ್ಲರಿಗೂ ಬಯಸುತ್ತಾ, ದೇವಿಯನು ಬೇಡುತ್ತಾ ನವದುರ್ಗೆಯರ ಶಕ್ತಿ ಯುಕ್ತಿಗಳು ನಮ್ಮ ಜೀವನಕ್ಕೆ ಬರಲೆಂಬ ಆಶಯದೊಂದಿಗೆ ದೇವರ ಆಶೀರ್ವಾದಕ್ಕೆ ಪಾತ್ರರಾಗಲು ನಾವೇನು ಮಾಡಬೇಕೆಂಬ ಬಗ್ಗೆ ನನ್ನ ತಿಳುವಳಿಕೆಯ ಎರಡು ಮಾತು.
ಬದುಕು ಎಂದರೆ ತಾಳ್ಮೆ. ತಾಳ್ಮೆಯಿಲ್ಲದವ ಬಾಳಿ ಹಲವಾರು ವರುಷಗಳ ಕಾಲ ಬದುಕಲಾರ. ತಾಳ್ಮೆ ಬೇಕು ಜೀನನಕೆ ಹೇಗೆಂದರೆ ನಾವು ಪೂಜಾರಿ ಅಥವಾ ಭಟ್ಟರು, ತಂತ್ರಿಗಳ ಮುಖೇನ ಮಾಡಿದ ಪ್ರತಿ ಪೂಜೆಯೂ ದೇವರಿಗೆ ಸಲ್ಲುತ್ತದೆ. ಆದರೆ ಅದರ ಫಲ ಸಿಗಲು ನಾವು ಕಾಯಬೇಕು. ದೇವರಿಗೆ ತನ್ನದೇ ಆದ ಒಂದು ಟೈಮ್ ಟೇಬಲ್ ಇದೆಯೇನೋ.. ಯಾರ್ಯಾರಿಗೆಲ್ಲ ಏನೇನು ಕೊಡಬೇಕೋ ಅದನ್ನೆಲ್ಲ ಮೊದಲೇ ಲೆಕ್ಕ ಹಾಕಿಟ್ಟು ಕೊಡಬೇಕಾದ ಸಮಯಕ್ಕೇ ಅವನು ಕೊಡುವನು. ತಾಳ್ಮೆಯೊಂದೇ ರಕ್ಷಣೆ ನಮಗೆ. ತಲೆ ಗಟ್ಟಿಯಿದೆ ಎಂದು ಬಂಡೆಗೆ ಬಡಿಯಲು ಸಾಧ್ಯವೇ.. ದೇವನಿರವ ನೆನೆದು ಅವನ ವರಕ್ಕಾಗಿ ಕಾದು, ಬದುಕಿನಲಿ ಬೆಂದು, ಭವದ ಸಿಂಧುವಾಗಲು ಉತ್ತಮ ಗುಣವಾದ ತಾಳ್ಮೆಯನ್ನು ರೂಢಿಸಿಕೊಂಡರೆ ಮಾತ್ರ ಸಾಧ್ಯ. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ