ಶುಕ್ರವಾರ, ಅಕ್ಟೋಬರ್ 12, 2018

519. ನಮ್ಮ ಉತ್ತರ

ನಾವೇನು ಕಲಿಸುತ್ತಿದ್ದೇವೆ?

ನಮ್ಮ ಮುದ್ದು ಮಕ್ಕಳ ತುಂಟ ಪ್ರಶ್ನೆಗೆ
ಬಾಯಿ ಮುಚ್ಚಿ ಕೂರು ಎಂಬ ನಮ್ಮ ಉತ್ತರ...

ಉತ್ಸಾಹ ಚಿಮ್ಮಿ ಅದರ ಬಗ್ಗೆ ಕೇಳುತ್ತಿದ್ದರೆ,
ಅಧಿಕ ಪ್ರಸಂಗ ಬೇಡವೆಂಬ ಜೋರು ಧ್ವನಿಯದು...

"ಕತ್ತಲ್ಯಾಕೆ, ಬೆಳಕು ಯಾಕೆ ಹೇಳು ಮಾತೆಯೇ?"
"ಕೆಲಸವಿಹುದು ನನಗೆ ಬೇರೆ, ಅದು ಹಾಗೆಯೇ!"

"ಅಪ್ಪ, ರಾತ್ರಿ ಸೂರ್ಯನೆಲ್ಲಿ ಜಾರಿ ಹೋಗುವ?"
"ಸುಮ್ನೆ ಕೂರೊ ತರ್ಲೆ,ಅವ್ನು ನಾಳೆಯೇ ಬರುವ."

"ಅಕ್ಕ,ಯಾಕೆ ಚಂದ ಮಾಮ ಹಗಲಲಿ ಇಲ್ಲ?"
"ಟೈಮೆ ಇಲ್ಲ ಅವನಿಗೆ ಶಾಲೆಗ್ಹೋಗ ಬೇಕಲ್ಲಾ?"

ಅಣ್ಣಾ, ಮೀನು ನೀರಲ್ಯಾಕೆ ಇರುತ್ತೆ, ಮೇಲೆ ಬಂದ್ರೆ ಸಾಯುತ್ತೆ?"
"ಕಾಲು ಇಲ್ಲವಲ್ಲ, ನಡಿಯೋದ್ ಹ್ಯಾಗೆ ಕಲ್ಲಲಿ?"

"ಮಾಮ,ಮಾಮ ಡಾಕ್ಟರ್ಯಾಕೆ ಸೂಜಿ ಕೊಡ್ತಾರೆ?"
"ರೋಗವನ್ನು ಭದ್ರವಾಗಿ ಸೂಜಿಯೊಳಗೆ ತುಂಬಿಸ್ತಾರೆ!"

"ಅಜ್ಜಿ, ನಿನ್ನ ಕೂದಲ್ಯಾಕೆ ಬಿಳಿಯ ಬಣ್ಣ ಬಂದಿದೆ?"
"ಸಾಯಲಿಕ್ಕೆ ನನ್ನ ದಿನ ಹತ್ತಿರವೇ ಬಂದಿದೆ."

ಸಮಯ, ಮೆದುಳ ಶಕ್ತಿ ನೋಡಿ ಹಿರಿಯರೆ ಹೇಳಿ ಉತ್ತರ.
ಕ್ಲಾಸಿನಲ್ಲು, ಮನೆಯ ಒಳಗೂ "ಬಾಯಿ ಮುಚ್ಚಿ ಎಲ್ಲರೂ."

@ಪ್ರೇಮ್@

ಅಜಿತ್ ರವರ ವಿಮರ್ಶೆ

@ಪ್ರೇಮ್ ಮೇಡಂ...

*ನಾವೇನು ಕಲಿಸುತ್ತಿದ್ದೇವೆ*

ಇದಂತೂ ಬಹಳ ಗಂಭೀರ ವಿಷಯ ಅಷ್ಟೇ ಸತ್ಯ ಕೂಡಾ... ಪ್ರತಿ ಮನೆಯೊಳಗೆ ನಡೆಯುವಂತಹ ಕುತಹಲವು ಸಹ ಇದಾಗಿದೆ *ಹೊಸ ಜಗತ್ತಿಗೆ ಕಾಲಿಟ್ಟು ಎಲ್ಲವನ್ನು ತಿಳಿಯಬೇಕು ಅನ್ನುವ ಬರದಲ್ಲಿರುವ ಸಣ್ಣ ಬುದ್ದಿಯ ಪ್ರಶ್ನೆಗಳು*
ನಾವೆಲ್ಲ ಎಷ್ಟು ಇದಕ್ಕೆಲ್ಲ ಉತ್ತರವನ್ನು ನೀಡುತ್ತೇವೆ.?
ಉತ್ತರ ನೀಡುವಷ್ಟು ಸಮಯವಿದ್ದರೂ ನಾಳೆ ಹೇಳುತ್ತೇನೆ , ಸಮಯವಿಲ್ಲ ,ತರ್ಲೆ, ಎಂದು ಸುಮ್ನೆ ಕುಡಿಸಿ ಬಿಡ್ತಿವಿ ಮಕ್ಕಳನ್ನ *ಯಾಕೆಂದ್ರೆ ಆ ಪ್ರಶ್ನೆಗೆ ಉತ್ತರವೇ ನಮಗೆ ಬರೋಲ್ವಲ್ಲ ಅದಕ್ಕೆ ಈ ವಿವಿಧ ಉತ್ತರ*... ಆ ಬಾಲ್ಯ ಯಾಕೆ ನೆನೆಯುವುದಿಲ್ಲ ನಾವು.? ನಾವು ಎಲ್ಲರೂ ಇದೆ ಪ್ರಶ್ನೆ ಕೇಳಿದ್ದು ಉಂಟಲ್ಲವವೇ..!
ಕಂಡುಕೊಳ್ಳದ ಉತ್ತರ ಪ್ರಶ್ನೆಯಾಗಿಯೇ ನಿಲ್ಲುವುದು...
*ತಿಳಿ ಹೇಳಿ ಮುಂದಿನ ಮುಂದಿನ ಪೀಳಿಗೆ ಎಲ್ಲವೂ ಅರ್ಥಮಾಡಿಕೊಳ್ಳಲು* ಅದು ಈ ಪಾಸ್ಟ್ ಯುಗದಲ್ಲಿ....

*ಬಾಯಿ ಮುಚ್ಚಿ ಕುರು ಎಂಬ ಉತ್ತರ* ಎಷ್ಟು ಸಲ ಕೊಟ್ಟಂತದ್ದು, ಅದು ನಮ್ಮ ಮನೆ ಮಕ್ಕಳಿಗೆನೇ.... ಅಲ್ವ ಅವರೆಲ್ಲ ಮುಂದೇನು ಇದೆ ಉತ್ತರವ ಕೊಡುತ್ತ ಬೊಗಬಲ್ಲರೆಂದು ಮರೆತು ಮತ್ತೆ ಅದೇ ಮಾತು....

*ಕತ್ತಲು ಯಾಕೆ, ಬೆಳಕು ಯಾಕೆ ಅಂದಾಗ... ಅದು ಹಾಗೆ ಇದೆ ಹೋಗು ನನಗೆ ಕೆಲಸವಿಹುದು*... ಅಬ್ಬಾಬ್ಬ ತಾಯಿಗೆ ಜಗದ ನಿಗೂಢತೆಯಬಗ್ಗೆ, ಜನರ ಜೀವನದ ಬಗ್ಗೆ, ಜೀವನದ ದಾರಿಯನ್ನೇ ನೀನು ತಿಳಿಸುವವಳು... ನೀನೆ ಹಿಗ್ ಅಂದ್ರೆ ಹೆಂಗಮ್ಮ *ಆದರೂ ನೀನ್ಯಾಕೆ ಕೆಲಸ ಮಾಡ್ತಿದೀಯಾ..? ಅದು ಯಾರಿಗಾಗಿ ಕೆಲಸ ?*....

*ಅಪ್ಪ ರಾತ್ರಿ ಸೂರ್ಯನೆಲ್ಲಿ ಜಾರಿ ಹೋವನು... ಉತ್ತರವೇ ನಾಳೆ ಬರುವ*.... ಜೀವನದ ಶಕ್ತಿ, ದಾರಿದೀಪ, ಧೈರ್ಯ, ಎಲ್ಲವೂ ನೀನೆ ಅಪ್ಪ, ಮೊದಲು ಕಂಡ ಹೀರೋ ನೀನೆ... *ಆದರೆ ನಿನ್ನೊಮ್ಮೆ ಭೂಗೋಳದ ಬಗ್ಗೆ ಸ್ವಲ್ಪನಾದ್ರು ತಿಳ್ಕೊಕಣಪ್ಪ...* ನಿನ್ನ ಮಗುವಿನ ಉತ್ತರಕ್ಕಾದರು ತಿಳಿದುಕೊ.. ಗದರದಿರು... ನೀನು...ನಿನ್ನೊಲ್ಲೊಬ್ಬ ಶ್ರೇಷ್ಠ ವ್ಯಕ್ತಿಯನ್ನು ಕಾಣುವ ಮೊದಲ ಜೀವ ಈ ಮಗು...

*ಮಗುತನದ ಮುದ್ಗತೆಗೆ ಮಗುವಂತೆ ಉತ್ತರಿಸಿ ನೀವೆಲ್ಲ*....

*ಅಕ್ಕಾ ಚಂದಮಾಮ ಹಗಲಲ್ಲಿ ಯಾಕೆ ಇಲ್ಲ... ಟೈಂ ಇಲ್ಲ ಶಾಲೆಗೊಗಬೇಕು*...
ವ್ಹಾವ್ ಎಂತ ಉತ್ತರಕನಕ್ಕ ಶಾಲೆಯ ವಿಷಯವನ್ನೇ ನೀನು ಕಲಿಸಿಕೊಡದಿದ್ದರೆ ಶಾಲೆ ಇನ್ನೆತಕ್ಕೆ ಅಕ್ಕಾ..? *ಬಾಲ್ಯದಲ್ಲಿ ಇಬ್ಬರು ತಾಯಂದಿರು ಅದರಲ್ಲಿ ನೀನು ಎರಡನೆಯವಳು*... ಶಾಲೆಯ ಕಲಿಕೆಯು ಇದೆಯಮ್ಮ ಜರುಗದೆ ಇರು ಉತ್ತರವ ನೀನು ಕೊಡುತಲಿರು...

*ಅಣ್ಣಾ ಮೀನು ಯಾಕೆ ಮೇಲಿಲ್ಲ ನಿರಲ್ಲ್ಯಾಕಿದೆ.... ಕಾಲು ಇಲ್ಲವಲ್ಲ ಅದಕ್ಕೆ* ಅಣ್ಣ ನೀನು ಸಲುಗೆಯಲ್ಲಿ, ಜಗಳದಲ್ಲಿ, ಹಿರಿತನದಲ್ಲಿ ಜೊತೆಗಿದ್ದು ಗೆಳೆಯನಂತೆ ಇರುವವನು ನೀನು.... ನೆನಪಿರಲಿ ಮರು ಪ್ರಶ್ನೆಯನ್ನು ಹಾಕಿದರೆ ನೀನು ಸುಮ್ಮನೆ ಇರಬೇಕಾದೀತು... *ಅಣ್ಣ ಕಾಲಿರುವ ನೀನು ನಿರಲ್ಲಿಯೂ ಇರಬಹುದಾ.?* ಕೈ ಇರುವ ನೀನು ಹಾರಬಲ್ಲೆಯಾ.? ಎಂಬ ಪ್ರಶ್ನೆ ಬಿದ್ದರೆ ಮರು ಮಾತಿಲ್ಲದೆ ತಲೆಗೆ ಒಂದು ಏಟು ಕೊಡುವದನ್ನ ನೀನು ಮರೆಯುವುದಿಲ್ಲ ಅಲ್ವಣ್ಣ.? ತಿಳಿದಷ್ಟು ಹೇಳು.. ಇಲ್ಲವಾದರೆ ಗೊತ್ತಿಲ್ಲ, ನಾನು ತಿಳ್ಕೊಂಡು ಹೇಳ್ತೀನಿ ಅಂತ ಹೇಳು...

*ಮಾಮ ಡಾಕ್ಟರ್ ಯಾಕೆ ಸೂಜಿ ಮಾಡ್ತಾರೆ..? ರೋಗವನ್ನು ಭದ್ರವಾಗಿ ಸೂಜಿಯೊಳಗೆ ತುಂಬಿರುತ್ತಾರೆ* ಒಯ್ ಮಾಮ ನೀನು ಮೆಡಿಕಲ್ ಬಗ್ಗೆ ತಿಳಿದುಕೊಂಡಿರುತ್ತೀಯೋ ಇಲ್ವೋ ಗೊತ್ತಿಲ್ಲ,, ಆದರೆ ನೀನು ಮಾತ್ರ ಸಲುಗೆಗೆ ಮಾವ ಮೋಜು ಮಸ್ತಿಗೆ, ನೋವು ನಲಿವಿಗೆ, ಜೀವನದ ಆಧಾರ ಸ್ತಂಭಕ್ಕೆ ಮಾವ ನಿನ್ನ ಒಲವಿನ ಪ್ರೀತಿಗಾದ್ರು ಉತ್ತರ ನೀಡು.... *ಅದು ಔಷಧಿ ಅಂತ ಆದ್ರು ಹೇಳು*.. ಯಾವುದೇ ಸಮಯಕ್ಕೂ ನೀನು ಮೊದಲು ನೆನಪಾಗುವ ಜೀವ ಮಾವ ನೀನು....

*ಅಜ್ಜಿ ನಿನ್ನ ಕೂದಲ್ಯಾಕ್ ಬಿಳಿ ಬಣ್ಣ..?* *ಸಾಯಲಿಕ್ಕೆ ನನ್ನ ದಿನ ಹತ್ತಿರ ಬಂದಿದೆ*...

ಅಜ್ಜಿ ನೀನು ಹಿರಿಯ ಜೀವ ಎಲ್ಲದರ ಬಗ್ಗೆ ತಿಳಿದುಕೊಂಡವಳು ನೀನು...
*ಚಿತೆಗೆ ಬೆಂದು ಚಿಂತೆಯಾಗಿಯೇ ಉಳಿದು ಬಹುದೊಡ್ಡ ಬದುಕನ್ನೇ ಭುಧಿಯಂತೆ ಬಳಸಿಕೊಂಡು ಬತ್ತಿಯಾಗಿಯೇ ಉಳಿದ ಜೀವ*... ನಿನ್ ಹಿಗಂದ್ರೆ ಹೆಗಜ್ಜಿ...
ಬಹುಶಃ ಈ ಅಜ್ಜಿಗೂ ಸಾವಿನ ಮೇಲೆ ಕೋಪ, *(ಆದರೂ ಹುಸಿಯನುಡಿವಳು ಸಾವು ಬಹು ಬೇಗನೆ ಬರಬಾರದೆ ಅಂತ)* ಅದನ್ನು ಮೊಮ್ಮಗನ ಮುಂದೆ ಸಾವಿನ ಪದವನ್ನು ವಿಚಿತ್ರವಾಗಿ ಕೋಪದಲ್ಲಿ ತಿಳಿಸುವ ಭಾವನೆ ಅವಳಲ್ಲಿ... ತುಸು ಸೌಂದರ್ಯಕ್ಕೂ ಅವಳು ಆದ್ಯತೆ ಕೊಡುವಂತಿದೆ... ಅಜ್ಜಿ ಕೂದಲಿನ ಬಗ್ಗೆ ನೀನೇನು ಸಾಯ್ಮ್ಟಿಪಿಕ್ ರಿಸನ್ ಏನು ಕೊಡಬೇಡ... *ನಿನ್ನ ಮುದುಕುತನದ ಬದುಕಿನುದ್ದವನ್ನು ಕಥೆಯಾಗಿ ಹೆಳಜ್ಜಿ*.ನೀನು ಅಸರೆಯಾದ ಆಲದ ಮರ ಈಗ ಮಾವಿನ ಮರಕ್ಕೆ ಸಲಹೆ ನೀಡಜ್ಜಿ....

*ಸಹಜವಾಗಿ ಬರುವ ಪ್ರಶ್ನೆಗೆ, ಸಮಯ, ಭುದ್ದಿವಂತಿಕೆಯ ಉತ್ತರ, ಹಿರಿಯ ಜೀವಗಳೇ ನೀವೇ ಕೊಡಬೇಕು*... ಸಾಮಾನ್ಯ ಜೀವನದ ಬಗ್ಗೆ ಮನೆಯವರೇ ತಿಳಿಸಿಕೊಡಬೇಕು.. ಶಾಲೆ ಎಲ್ಲದನ್ನ ಕಳಿಸಿ ಕೊಡಲ್ಲ... *ನಿಘುಡತೆಯ ಪ್ರಶ್ನೆಗೆ ಸಲಿಸಾಲಿ ಉತ್ತರವ ನೀಡಿ.* ಆಗ ಮುಂದೊಂದು ದಿನ ಆತ ಬಹುದೊಡ್ಡ ಜಾನನು ಅಗಬಲ್ಲ...

ಒಂದು ಮಾತಿನ ನಿದರ್ಶನದಂತೆ *ಡಾಕ್ಟರ್ ಮಕ್ಳು ರೋಗಿಷ್ಟರಂತೆ, ಟೀಚರ್ ಮಕ್ಳು ದಡ್ಡರಂತೆ, ಪೊಲೀಸನ ಮಕ್ಳು ಕಳ್ಳನಂತೆ, ವೋಕಿಲನ ಮಕ್ಳು ಕ್ರಿಮಿನಲ್ ಅಂತೆ ಹೀಗೆ ಎಲ್ಲ ಹುದ್ದೆಯಲ್ಲಿನ ಪ್ಯಾಮಿಲಿ ಅಕ್ಕೊಂದು ಇಲ್ಲೊಂದು ಅಪೋಸಿಟ್ ಅಗೆ ಇರುತ್ತೆ*...

ಈ ಕವನದ ಸಂದೇಶಕ್ಕಾದರು ತಮ್ಮ ತಮ್ಮ ಮನೆ ಮಕ್ಕಳ ಪ್ರಶ್ನೆಗೆ ಹೀರೋಗಳಾಗಿ, ಅವರಲ್ಲಿ ಜ್ಞಾನಿಗಳಾಗಿ...

*ಬಹಳ ಸತ್ಯವೇ ಈ ಕವನ ಮೇಡಂ.. ನಿಜದ ಅರಿವಲ್ಲಿ ನೈಜತೆಯನ್ನು ಹುಟ್ಟು ಹಾಕಿದ್ದಿರ..! ಉತ್ತರ ಕೊಟ್ಟ ಎಷ್ಟು ಜೀವಗಳು ಓದುವಂತದ್ದು, ಹಾಗೆ ಇದೆ ತರಹ ಪ್ರಶ್ನೆ ಕೇಳಿದ ಮೊಗದಲ್ಲಿ ನಗುವ ಕಾಣುತ್ತಿವೆ....*

*ಚುಪರ್*😊😊

WHAT DO WE TEACH

For the questions of our
Children cute,
Shut up is our
Answer to mute

Overwhelmed they ask
About it.
This is too much
Is our response well knit,

Can you tell me Mom
Why darkness there,
Why light and day?
"I've other work
No words anymore say."

Dear Dad, where does the sun,
At night slide and run?
"Keep quiet you naughty
Tomorrow he'll
return got it?

Sweet Sister can you tell
Why Moon Uncle doesn't
Appear day?
" He hasn't time,
Ought not he go to school?"

Strong brother, why fish
Live in water die,
out of it?
" Having no legs,
How should she
Walk and rock on rock?"

Awesome uncle, tell me,
Why does doctor give injection?
"To suck and fill the ill
Into the syringe, no more tension."

Good Granny tell me why
Your hair so grey?
" It's the time for me dear
To say the world
good bye"

Grasp be diligent,
Dear elders to answer.
Time, place and ability of brains that are
In the class or at home
Let not be 'Shut up'
your theme.
@Prem@
Translated by G. R. Pais.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ