ಶನಿವಾರ, ಅಕ್ಟೋಬರ್ 6, 2018

511.ಬಿಟ್ಟು ಬಿಡಬಾರದೇ

ಬಿಟ್ಟು ಬಿಡಬಾರದೆ..

ಪರರ ಮಣ್ಣಿನ ಅತ್ಯಾಸೆ,
ಪರರ ಮಡದಿಯ ವ್ಯಾಮೋಹ,
ಪರರ ಸ್ವತ್ತಿನ ಮೇಲಿನ ಕಣ್ಣು,
ಪರರ ಸಂಸಾರದ ಮೇಲಿನ ದೃಷ್ಠಿ..

ಇತರರೆಡೆ ದರ್ಪದ ಭಾವ,
ಕುಟುಂಬದೆಡೆ ಬಿಗುವಿನ ನೋಟ,
ಮಕ್ಕಳೆಡೆ ಬಿಂಕದ ಬಿಗುಮಾನ
ಗೆಳೆಯರೆಡೆ ತನ್ನದೆಂಬ ಅಹಂಕಾರ..

ಮನದ ಬಯಕೆಗಳಿಗಾದ ದಾಸ,
ಮಡದಿ ಕೈ ಕೆಳಗಾದ ಬೋಳ,
ಪರಧನವ ಬಯಸುವ ಜಿಪುಣತನ,
ಯಾರಿಗೂ ಕೊಡದೆ ಕೂಡಿಡುವ ಜನ..

ಮನಗಳೊಡನೆ ಹಾಳುಹರಟೆ,
ಬೇರೆಯವರ ವಿಷಯ ವರಾತ,
ನಮ್ಮದಷ್ಟೆ ನಮಗೆ ಸೀಲದೆ.
ಇತರರಿಗೂ ಸೋಲೇ...,
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ