ಅಮ್ಮನುದರದಲಿ ನನ್ನ ಜನ್ಮವಾದದ್ದು ಪವಾಡ..
ಅಪ್ಪನುಸಿರಿನಲಿ ಹೆತ್ತೊಡಲ ಜವಾಬ್ದಾರಿಯದ್ದು ಪವಾಡ..
ವನದೊಳಗೆ ಹಕ್ಕಿಯೊಂದು ತಿಂದು ಹಾಕಿದ ಬೀಜ
ಮೊಳಕೆಯೊಡೆದು ಮರವಾದದ್ದು ಪವಾಡ..
ಕ್ಯಾಲ್ ಕ್ಯುಲೇಟರಿನಿಂದ ಲೆಕ್ಕ ಮಾಡುವುದ ನೋಡಿ ಮುಂದುವರಿದು
ಕಂಪ್ಯೂಟರ್, ಮೊಬೈಲ್ ನದ್ದು ಪವಾಡ..
ಪಕ್ಕದೂರಿಗೂ ನಡೆದೇ ಹೋಗುತಲುದ್ದ ಮನುಜ
ಮಂಗಳಕ್ಕೆ ಹಾರಿದ್ದು ಪವಾಡ..
ಮನದ ಮೂಲೆಯಲಿ ಹುಟ್ಟಿದ ಆಲೋಚನೆ
ಕವಿತೆರೂಪ ಪಡೆದದ್ದು ಪವಾಡ,
ಹೃದಯದುಸಿರಿನಲಿ ಮೊಳಕೆಯೊಡೆದ ಪ್ರೇಮ
ಅವಳೊಡಲಲಿ ಬಿತ್ತಿದ್ದು ಪವಾಡ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ